Monday, 5 July 2010
ವಿಮರ್ಶೆ ಗುಂಪುಗಾರಿಕೆಯಾಗಬಾರದು: ಚದುರಂಗ (೧೫ ವರ್ಷದ ಹಿಂದಿನ ಸಂದರ್ಶನ)
ಚದುರಂಗ(ಸುಬ್ರಮಣ್ಯ ರಾಜೆ ಅರಸ್)ರು ಒಬ್ಬ ವಿಶಿಷ್ಟ ಗದ್ಯ ಶೈಲಿಯ ಲೇಖಕ. ಇವರು ತಮ್ಮದೇ ಶೈಲಿಯಿಂದ ಓದುಗರನ್ನು ಬೆರಗುಗೊಳಿಸುತ್ತಾರೆ. ಇವರು ಸುಮಾರು ಅರ್ಧ ಶತಮಾನದಿಂದ ಬರೆಯುತ್ತಿದ್ದು ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಪ್ರಕಟಿಸಿದ್ದರೂ ಓದುಗರ ಹೃದಯದಲ್ಲಿ ಸ್ಥಾನ ಪಡೆದಿರುವುದು ಸರ್ವವಿತ. ಇವರು ತಮ್ಮ ಎಂಬತ್ತರ ಹರೆಯದಲ್ಲೂ ಉತ್ಸಾಹದಿಂದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಕಾಲೇಜುಗಳ ಪ್ರತಿಭಾಶ್ರೀ -೯೫ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಂದರ್ಶನ.
*ನೀವು ಶಿಕ್ಷಣ ಪಡೆಯುವಾಗ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಮತ್ತು ನಿಮಗೆ ಸಾಹಿತ್ಯದ ಒಲವು ಹೇಗುಂಟಾಯಿತು?
- ಮೈಸೂರಿನಲ್ಲಿ ರಾಜರ ಆಡಳಿತವಿದ್ದಾಗ ನಾನಿನ್ನೂ ಬಾಲಕ. ನಾನು ಮೈಸೂರಿನ ಹತ್ತಿರದ ಕಲ್ಲಹಳ್ಳಿಯವನು. ತಂದೆ ಕೃಷಿಕ, ಅಣ್ಣ ಲಾಯರ್, ದೇವರಾಜ ಅರಸರ ಹತ್ತಿರದ ಸಂಬಂ. ಶಿಕ್ಷಣ ಕೂಲಿ ಮಠದಿಂದ ಆರಂಭ. ನಂತರ ಮೈಸೂರಿನ ರಾಯಲ್ ಸ್ಕೂಲಿಗೆ ಸೇರಿದೆ. ಆನಂತರ ಆ ಶಾಲೆಯ ವ್ಯವಸ್ಥೆ ಇಷ್ಟಪಡದೆ ಪಬ್ಲಿಕ್ ಸ್ಕೂಲಿಗೆ ಸೇರಿದೆ. ಮುಂದೆ ಪೂನಾದಲ್ಲಿ ‘ಲಾ’ ಅಭ್ಯಾಸ. ಅನಂತರ ಬರಹ ಪ್ರಾರಂಭ. ಪ್ರೇಮ ವಿವಾಹದ ಕಾರಣದಿಂದ ಮನೆಯಲ್ಲಿ ಆಗ ಆದ ಘರ್ಷಣೆಯಿಂದ ಸಾಹಿತ್ಯದ ಕಡೆಗೆ ಒಲವು, ಆವತ್ತು ಸಾಹಿತಿಗಳನ್ನು ಗೌರವಿಸುತ್ತಿದ್ದರು. ಸಾಮರಸ್ಯವಿತ್ತು. ಇಂದು ವಿಮರ್ಶೆ ಹೆಚ್ಚಾಗಿದೆ. ಇದು ಒಳ್ಳೆಯದು, ಒಳ್ಳೆ ವಿಮರ್ಶೆ ಬರಬೇಕು. ಆದರೆ ಗುಂಪುಗಾರಿಕೆಯಾಗಬಾರದು. ನಾನು ಮಾಸ್ತಿಯವರ ಕಥೆಗಳಿಂದ ರೂಪುಗೊಂಡವನು. ಅನಂತರ ಲೋಹಿಯಾ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಬರೆಯಲು ಆರಂಭಿಸಿದೆ.
* ವೈಶಾಖದ ಕಾದಂಬರಿಯ ಪ್ರೇರಣೆ ಏನು? -ನನ್ನ ಹಳ್ಳಿಯ ಬದುಕಿನ ಗಾಢವಾದ ಸಂಬಂಧ. * ಈ ಕೃತಿಯ ಬಗೆಗಿನ ಪ್ರತಿಕ್ರಿಯೆ ಹೇಗೆ?
-ನಿರೀಕ್ಷೆ ಮೀರಿದ್ದು, ಕುವೆಂಪು ರುದ್ರಾವಸ್ತುವೆಂದರು. ರಾಜೀವ್ ತಾರಾನಾಥ್ ತುಂಬಿದ ಬುಟ್ಟಿ ಎಂದರು. ಈ ಕೃತಿಗೆ - ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದಲ್ಲದೆ, ಈ ಕೃತಿ ತಮಿಳಿಗೂ ತರ್ಜುಮೆಯಾಗಿ ಆ ಕೃತಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಬಂಡಾಯ ಸಾಹಿತ್ಯದ ಪ್ರಕಾರ ನಿರಂತರ ಸಾಹಿತ್ಯ ಪ್ರಾಕಾರವೆನ್ನುವುದಕ್ಕೆ ನೀವು ಕೊಡುವ ಕಾರಣಗಳೇನು?
-ಬಂಡಾಯ ನಿರಂತರ. ನವೋದಯದ ಪ್ರಕೃತಿಗೆ ಚಿತ್ರಣ ಜಾಸ್ತಿಯಾದಾಗ ವಿಚಾರಕ್ಕೆ ಮತ್ತು ಬದುಕಿಗೆ ಒತ್ತು ಕೊಟ್ಟು ಪ್ರಗತಿಶೀಲ ಪ್ರಾರಂಭವಾಯಿತು. ಪ್ರಗತಿಶೀಲದಲ್ಲಿ ಭಾಷೆಗೆ ಪ್ರಾಮುಖ್ಯವಿಲ್ಲದೆ ಸೊರಗಿತು. ಆಗ ನವ್ಯ ಸಾಹಿತ್ಯ ಹುಟ್ಟಿತು. -ನವ್ಯ ಸಾಹಿತ್ಯದಲ್ಲಿ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗಿದ್ದು, ದೋಷವೆನಿಸಿತು. ಆಗ ಮತ್ತೆ ಬಂಡಾಯ ಮತ್ತು ದಲಿತ ಸಾಹಿತ್ಯ...,
* ತಮ್ಮ ‘ಸರ್ವಮಂಗಳ’ ಕಾದಂಬರಿಯನ್ನು ತಾವೇ ನಿರ್ದೇಶಿಸಿ ಚಲನಚಿತ್ರವಾಗಿಸಿದ ಅನುಭವವೇನು?
-ಬೇರೆ ನಿರ್ದೇಶಕರು ಕೆಡಿಸುವುದು ಬೇಡ ಎಂದು ನಾನೇ ಕೆಡಿಸಿದೆ (ನಗು) * ಇವತ್ತಿನ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಸಾಹಿತ್ಯ ಸಮರ್ಥವಾಗಿ ಸ್ಪಂಸಿದೆಯೇ? -ಭಾರತ ವಿಶಾಲವಾದ ದೇಶ. ಭಾಷೆಗಳು ಹಲವು ಅಲ್ಲಲ್ಲಿ ಸ್ಪಂದನವಾಗಿದೆ. ನನಗೆ ತಿಳಿದಿರುವ ಹಾಗೆ ನಮ್ಮಲ್ಲಿಯೂ ಸಾಕಷ್ಟು ಸ್ಪಂದನ ಆಗಿದೆ.
*ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ?
-ಶೇಷನ್ ಗುರುತಿನ ಚೀಟಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ರಾಜಕೀಯಕ್ಕೆ ಉತ್ತಮ ತಿರುವು ಕೊಡಬಹುದು. *ತಾವು ಗದ್ಯವನ್ನು ಆರಿಸಿಕೊಂಡಿದ್ದಕ್ಕೆ ಕಾರಣ? -ನಾನು ಕವಿಯಲ್ಲ ಅದಕ್ಕೆ. *ಇತ್ತೀಚೆಗೆ ಒಂದು ಕವನ ಸಂಕಲನ ಬಂದಿದೆಯಲ್ಲ? -ಅದು ಒಂದು ಬದಲಾವಣೆ ಅಷ್ಟೆ. *ಜೀವನದ ಹಾಗೂ ಲೇಖಕರ ಬಗ್ಗೆ ನಿಮ್ಮ ಸಂದೇಶ ಏನು? -ಯಾವುದಕ್ಕೂ ಬದ್ಧರಾಗಬಾರದು, ಅನಿಸಿದ್ದನ್ನು ಬರೆಯಬೇಕು, ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸಬೇಕು. * ತಾವು ಈಗ ಏನನ್ನಾದರೂ ಬರೆಯುತ್ತಿರುವಿರಾ? -ಹೌದು ಹೆಜ್ಜಾಲ ಎನ್ನುವ ಕಾದಂಬರಿ ಬರೆಯುತ್ತಿದ್ದೇನೆ *ಇದರ ತಿರುಳೇನು? -ನನ್ನ ಸಮಗ್ರ ಜೀವನಾನುಭವ.
*ಕೊನೆಯದಾಗಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾವ್ಯಕಮ್ಮಟಕ್ಕೆ ಸಂಬಂಸಿದಂತೆ ಯುವಕವಿಗಳ ಕವನ ಸಂಕಲನ ‘ಹದಿಹೆಜ್ಜೆ’ ಕೃತಿಯ ಮುನ್ನುಡಿಯಲ್ಲಿ ಜಿ.ಎಚ್. ನಾಯಕ್ರವರು ಪ್ರಸ್ತಾಪಿಸಿರುವ ‘ಕನ್ನಡ ಕಾವ್ಯ ಮತ್ತು ಹೊರಳು ದಾರಿಯಲ್ಲಿದೆ’ ಎಂಬ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
- ನಾನು ಆ ಕಮ್ಮಟಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದೇನೆಂದು ನಿಮಗೆ ಗೊತ್ತು. ಆದರೆ ಆ ಕೃತಿಯನ್ನು ನಾನು ಓದಿಲ್ಲ. ಕಾವ್ಯ ಯಾವಾಗಲೂ ಹೊರಳಲೇಬೇಕು. ಆದರೆ ಅದು ಹೇಗೆ ಹೊರಳುತ್ತದೆ ಎಂಬುದನ್ನು ವಿಮರ್ಶಕರಾದ ಜಿ.ಎಚ್. ನಾಯಕರೆ ಹೇಳಬೇಕು.
ಹೆಸರಾಂತ ಕಾದಂಬರಿಕಾರ ದಿವಂಗತ ಚದುರಂಗ ( ಸುಬ್ರಮಣ್ಯ ರಾಜೆ ಅರಸ್)ರ ಈ ಸಂದರ್ಶನ ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ದಿನಾಂಕ ೧೩ ಮಾರ್ಚ್ ೧೯೯೫ ಸೋಮವಾರ ಪ್ರಕಟಗೊಂಡಿದೆ.
ದಲಿತ ಲೋಕದ ನಾನಾ ಮುಖ ತೋರುವ ನಾಟಕ: ಮಣೆಗಾರ

ದಲಿತ ಆತ್ಮಕತೆಗಳ ಸಾಲಿನಲ್ಲಿ ಮರಾಠಿ ಆತ್ಮಕತೆಗಳಿಗೆ ಪ್ರತ್ಯೇಕ ಪಾಲಿದೆ. ಕನ್ನಡದ ಮಟ್ಟಿಗೆ ಕವಿ ಡಾ. ಸಿದ್ದಲಿಂಗಯ್ಯನವರ ಊರು-ಕೇರಿ ಹೊರತುಪಡಿಸಿ ಹೆಚ್ಚು ಸುದ್ದಿಯಾದದ್ದು ದಲಿತರಲ್ಲಿ ಎಡಗೈ ಗುಂಪಿಗೆ ಸೇರಿದ ರಾಮಯ್ಯನವರ ಆತ್ಮಕತೆ ‘ಮಣೆಗಾರ’. ಇದು ಊರುಕೇರಿಗಿಂತ ಬೇರೆಯದೇ ಧಾಟಿ ಮತ್ತು ಸಂಕಟಗಳನ್ನು ಒಳಗೊಂಡಿದೆ.
ಹಸಿವು- ಅನ್ನ, ಜಾತಿ-ಅವಮಾನಗಳ ಸುರುಳಿಯೊಳಗೆ ಸಿಕ್ಕಿರುವ ಒಂದಿಡೀ ಜಾತಿಯ ಪ್ರತಿನಿ ರಾಮಯ್ಯ ಮತ್ತು ಅವರ ಕುಟುಂಬ ಪಟ್ಟ ಪಾಡುಗಳನ್ನು ಒಂಚೂರು ಆಡಂಬರ, ಅಬ್ಬರ, ಮೆಲೋ ಡ್ರಾಮಾಗಳಿಲ್ಲದೆ ಕೃತಿಯಂತೆಯೇ ಸಹಜವಾಗಿ ರಂಗದ ಮೇಲೆ ತರಲಾಗಿದೆ. ಅದು ಎಷ್ಟೊಂದು ಸಹಜ ಅಂದರೆ ಕಣ್ಣು ತನ್ನಷ್ಟಕ್ಕೆ ತಾನೆ ಒದ್ದೆಯಾಗುತ್ತದೆ. ಕೆಲವು ಕಡೆ ಲಘುಹಾಸ್ಯದ ಧಾಟಿಯಲ್ಲಿ ಕ್ರೂರ ಸತ್ಯಗಳನ್ನು ಅಭಿನಯಿಸುವಾಗ ಶಿಳ್ಳೆಗಳ ಅಬ್ಬರವೂ ಸಹಜವಾಗಿಯೇ ಬಂದುಬಿಡುತ್ತದೆ.
ಕೊಡುವ ಸ್ಥಾನದಲ್ಲಿರುವವನಿಗೆ ಪಡೆಯುವವನ ಕರುಳ ಸಂಕಟಗಳು ಅರ್ಥವಾಗುವುದಿಲ್ಲ. ದಲಿತರೂ ಸೇರಿದಂತೆ ಎಲ್ಲರನ್ನೂ ಇನ್ನೂ ಕಾಪಾಡುತ್ತಿರುವ, ಮುಂದೆಯೂ ಕಾಪಾಡಬಲ್ಲದೆಂಬ ಆತ್ಮ ವಿಶ್ವಾಸ ಹುಟ್ಟಿಸುವ ‘ಸ್ವಾಭಿಮಾನ’ ಎಂಬ ಅದ್ಭುತವನ್ನು ಮತ್ತೆ ಮತ್ತೆ ಒತ್ತಿ ಹೇಳುವ ರಾಮಯ್ಯನವರ ನೌಕರಿಯ ಮೊದಲ ಮತ್ತು ನಂತರದ ಹೋರಾಟಗಳು ಮನ ಕಲಕುತ್ತವೆ. ಸಮುದ್ರದ ನೆಂಟಸ್ತನ, ಉಪ್ಪಿಗೆ ಬರ ಎಂಬಂತೆ, ಊರಲ್ಲಿ ಎಲ್ಲರೂ ಪರಸ್ಪರ ಅಕ್ಕ, ಮಾಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆದುಕೊಂಡರೂ, ಜಾತಿ ಶ್ರೇಣಿಗಳು ದಲಿತರನ್ನು ಹೇಗೆ ಶೋಷಿಸುತ್ತವೆ ಎಂಬ ಸಮಾಜದ ಕ್ರೂರ ಮುಖಗಳನ್ನು ಕಟ್ಟಿಕೊಟ್ಟಿರುವ ರೀತಿಯನ್ನು ರಂಗದ ಮೇಲೆ ನೋಡಿಯೇ ಕಣ್ತುಂಬಿಕೊಳ್ಳಬೇಕು. ಕೋಣ ಕಡಿಯುವ ಮಾರಿಹಬ್ಬ, ಸರಗು(ದೇವರಿಗಿಟ್ಟ ನೈವೇಧ್ಯವನ್ನು ಕೋಣನ ರಕ್ತ ಬೆರೆಸಿ) ಚೆಲ್ಲುವುದು ಸೇರಿ ಅನೇಕ ದೃಶ್ಯಗಳು ಹಟ್ಟಿಯನ್ನು, ಹಳ್ಳಿಯನ್ನು ಒಟ್ಟೊಟ್ಟಿಗೆ ರಂಗದ ಮೇಲೆ ನಿಲ್ಲಿಸುತ್ತವೆ.
ಬೇಡಿತಿನ್ನುವ ಮಾದಿಗರನ್ನು ಅನ್ನಕ್ಕಾಗಿ ಕಾಡಿ ತಿನ್ನುವ ದಕ್ಕಲರ ಚಿತ್ರಣವಂತೂ ಹಸಿವಿನ ಅಗಾಧ ಸಂಕಟದೊಂದಿಗೆ ಮನಕ್ಕೆ ನಾಟಿಬಿಡುತ್ತದೆ. ದಲಿತರ ಹುಡುಗನೊಬ್ಬ ಕುರುಬನ ಕೊಳಲಿಗೆ ಆಸೆ ಪಡುವುದು, ಅದನ್ನು ಕುರುಬನ ಅನುಪಸ್ಥಿತಿಯಲ್ಲಿ ಬಾಯಿಗಿಟ್ಟು ನಲಿವಾಗ ಕಾಣುವ ಕನಸನ್ನು ಎಷ್ಟು ಅಭೂತಪೂರ್ವವಾಗಿ ಸೃಷ್ಟಿಸಲಾಗಿದೆ ಎಂದರೆ ಕಾರಂತರ ‘ಗೋಗುಲ ನಿರ್ಗಮನ’ ನಾಟಕದ ಕ್ಲಾಸಿಕ್ ದೃಶ್ಯಗಳ ನೆನಪನ್ನು ತರುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಚಲನಚಿತ್ರದಷ್ಟೇ ವೇಗವಾಗಿ ತನ್ನ ಎಲ್ಲ ಪರಿಣಾಮಗಳೊಂದಿಗೆ ಕತೆ ಬೆಳೆಯುತ್ತದೆ, ಸಾಗುತ್ತದೆ. ಎಲ್ಲೂ ಅಶ್ಲೀಲವೆನ್ನಿಸದ ಬೈಯ್ಗುಳಗಳು, ಶಾಲೆಯಲ್ಲಿ ಗುರುಗಳು ಮಾಡುವ ಜಾತಿ ತಾರತಮ್ಯದಿಂದ ಆತ್ಮಹತ್ಯೆಗೆ ಶರಣಾಗುವ ರಾಮಯ್ಯ ಅವರ ಸಹೋದರನ ಸಾವಂತೂ ಮನ ಕಲಕುತ್ತದೆ. ಇದೆಲ್ಲಕ್ಕೂ ಜಾತಿಯೊಂದನ್ನೇ ಕಾರಣ ಮಾಡದೆ ಒಟ್ಟು ಸಮಾಜ ಇದರ ಹೊಣೆ ಎಂಬಂತೆ ಚಿತ್ರಿಸಿರುವಲ್ಲಿ ನಿರ್ದೇಶಕ ಶಿವಶಂಕರನ ಜಾಣ್ಮೆ ಎದ್ದು ಕಾಣುತ್ತದೆ.

ದಲಿತರ ನಂಬುಗೆ, ಸೇವೆ, ಅವರನ್ನು ಇತರರು ನಡೆಸಿಕೊಳ್ಳುವ ರೀತಿಗಳನ್ನು ಸಣ್ಣ,ಸಣ್ಣ ದೃಶ್ಯಗಳಲ್ಲಿ ಎಲ್ಲಿಯೂ ಬೋರು ಹೊಡೆಯದಂತೆ ಪೋಣಿಸಲಾಗಿದೆ. ಆ ದೃಷ್ಟಿಯಿಂದ ಇದು ಒಟ್ಟು ಸಮಾಜ ನೋಡಬೇಕಾದ ನಾಟಕ. ನಾಟಕದ ಓಘ, ಸಹಜತೆಗಳಿಂದ ಬಿಚ್ಚಿಕೊಳ್ಳುವ ದಲಿತ ಲೋಕದ ಬೇರೆ ಬೇರೆ ಮುಖಗಳನ್ನು ತುಂಬಾ ಚಲನಶೀಲ ರೀತಿಯಲ್ಲಿ ಹೇಳಲಾಗಿದೆ. ಅದಕ್ಕಾಗಿ ಕೆಲವು ಸೆಲ್ಯುಲಾಯಿಡ್ ತಂತ್ರಗಳನ್ನೂ ಬಳಸಿಕೊಳ್ಳಲಾಗಿದೆ. ಮೊದಲ ಪ್ರದರ್ಶನವಾದ್ದರಿಂದ ಸಣ್ಣಪುಟ್ಟ-ದೋಷಗಳನ್ನು ಮರೆತುಬಿಡಬೇಕೆಂದರೂ ತಪ್ಪುಗಳೇ ಇಲ್ಲವೆನ್ನುವಷ್ಟು ಚೆನ್ನಾಗಿ ನಾಟಕ ಬಂದಿದೆ. ತುಂಬಾ ಕಡೆ ನಾಟಕದ ‘ಘಮ’ ರಂಗಾಯಣ, ನೀನಾಸಂ ತಂಡಗಳ ನಾಟಕಗಳನ್ನು ನೆನಪಿಸುತ್ತದೆ. ಮುದ ಕೊಡುವ ಸಂಗೀತ, ಬೆಳಕು, ವಸ್ತ್ರವಿನ್ಯಾಸ ಯಾವುದನ್ನೂ ಬೆರಳು ಮಡುಚುವಂತಿಲ್ಲ. ಪಾತ್ರಧಾರಿಗಳೆಲ್ಲರೂ ನೀರಿನ ಹರಿವಿನಂತೆ ಸಹಜ.
ನಾಟಕಕ್ಕೆ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಟಕಕಾರ ಚಂದ್ರಶೇಖರ ಕಂಬಾರರು, ನಾಟಕಕ್ಕೆ ಮುಖ್ಯ ಸರಕು ಸಂಘರ್ಷ, ಆತ್ಮಕತೆಯೊಂದರಲ್ಲಿ ಬರುವ ಸಂಘರ್ಷಗಳನ್ನು ಸಾದೃಶ್ಯಗೊಳಿಸುವುದು ಸುಲಭದ ಕೆಲಸವಲ್ಲ. ಕತೆ, ಕಾದಂಬರಿ, ಪದ್ಯಗಳ ಕಥನವನ್ನು ರಂಗಕ್ಕೆ ತರುವಾಗ ಇರುವ ಸವಾಲು ಅದು. ಹಾಗಾಗಿ ಈ ಸವಾಲನ್ನು ಶಿವಶಂಕರ್ ಹೇಗೆ ಗೆದ್ದಿದ್ದಾರೆ ಎಂಬ ಕುತೂಹಲದಿಂದ ತಾನು ನಾಟಕ ನೋಡಲು ಬಂದಿರುವುದಾಗಿ ಹೇಳಿದರು. ಇದನ್ನು ಕವಿ ಕೆ.ಬಿ. ಸಿದ್ದಯ್ಯ ಅವರೂ ಅನುಮೋದಿಸಿ ಮಾತನಾಡಿದರು. ಇದಕ್ಕೆ ಉತ್ತರ ನೀಡುವವರಂತೆ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು, ನಾಟಕಪರಂಪರೆಗಿಂತ ಕಥನ ಪರಂಪರೆಯಲ್ಲೇ ಕನ್ನಡರಂಗಭೂಮಿಗೆ ಹೆಚ್ಚು ಇತಿಹಾಸವಿದೆ. ನಾಟಕಗಳನ್ನು ರಂಗದ ಮೇಲೆ ತರುವುದು ಹೊಸ ಪರಂಪರೆ, ಮೊದಲಿನಿಂದಲೂ ಕತೆ, ಪುರಾಣ ಮತ್ತು ಮಹಾಕಾವ್ಯಗಳನ್ನೇ ನಾಟಕಗಳನ್ನಾಗಿ ರಂಗದ ಮೇಲೆ ತಂದು ಜನರಿಗೆ ಮುಟ್ಟಿಸಲಾಗಿದೆ. ಹಾಗಾಗಿ ‘ಮಣೆಗಾರ’ ನಾಟಕವಾಗುವ ಎಲ್ಲ ಅರ್ಹತೆಯನ್ನೂ ಪಡೆದಿದೆ ಎಂದರಲ್ಲದೆ ಇದನ್ನು ಸಮರ್ಥವಾಗಿ ರಂಗಕ್ಕೆ ತರುವ ಶಕ್ತಿ ಹಾಲ್ಕುರಿಕೆ ಶಿವಶಂಕರ್ಗೆ ಇದೆ ಎಂದರು. ಇದೆಲ್ಲ ನಡೆದದ್ದು ಗುರುವಾರ(೧ನೇ ಜುಲೈ ೨೦೧೦) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ.
೪ ಜುಲೈ ೨೦೧೦ರ ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
Saturday, 3 July 2010
ಲಲಿತ ಪ್ರಬಂಧ: ನೆರಳುಗಳು
‘ಅವನ ನೆರಳು ಕಂಡರೆ ನನಗಾಗುವುದಿಲ್ಲ’ ಎನುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಅನೇಕರನ್ನು ನಾವು ನಿತ್ಯ ನೋಡುತ್ತೇವೆ. ನೆರಳು ಕಂಡರಾಗದ ಜನಕ್ಕೆ ಸಂಬಂಸಿದ ವ್ಯಕ್ತಿಯೇ ಕಂಡುಬಿಟ್ಟರೆ! ವ್ಯಕ್ತಿಯಿದ್ದರೆ ತಾನೆ ನೆರಳು ಕಾಣುವುದು? ಇಲ್ಲಿ ನೆರಳಿನ ಉಪಮೆ ಉಪಯೋಗಿಸಿರುವುದರ ಹಿಂದಿನ ಉದ್ದೇಶ ಆ ‘ನೆರಳಿನ’ ವ್ಯಕ್ತಿಯನ್ನು ಇವರು ದ್ವೇಷಿಸುತ್ತಾರೆ.
ಆದರೆ ನಾವು ಹೋದಲ್ಲಿಗೆಲ್ಲಾ ನಾಯಿ ಬಾಲದಂತೆ ಬರುವ ತಮ್ಮ ನೆರಳು ಕಂಡರೆ ಎಷ್ಟು ಜನರಿಗಾಗುವುದಿಲ್ಲ, ಎಷ್ಟು ಜನ ರೋಮಾಂಚಿತರಾಗುತ್ತಾರೆ ಎಂಬುದನ್ನು ಲೆಕ್ಕ ಹಾಕುವವರ್ಯಾರು? ನೆರಳನ್ನು ವ್ಯಕ್ತಿಯೊಬ್ಬನ ವ್ಯಕ್ತಿತ್ವ ಅಳೆಯಲು ಅನೇಕ ಬಾರಿ ಅನೇಕ ವಿಧದಲ್ಲಿ ಉಪಯೋಗಿಸುವ ನಾವು, ಇಂತಹವರು, ಇಂಥವರ ವ್ಯಕ್ತಿತ್ವದ ನೆರಳಿನಿಂದ ಹೊರಬರಬೇಕೆಂದೊ, ಸೋಲಿನ ಕಹಿ ನೆರಳಿನಿಂದ ಇವರು ಬೇಗ ಹೊರಬರಲಿ ಎಂದು ಆಶಿಸುವಾಗಲೋ ನಮಗೆ ಗೊತ್ತಿಲ್ಲದಂತೆ ನೆರಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನೆರಳನ್ನು ಸಾಮಾನ್ಯವಾಗಿ ಸಿಹಿ, ಕಹಿ ಪ್ರಸಂಗಗಳಿಗೂ ಹೋಲಿಸುತ್ತೇವೆ. ನೆರಳಿಗೆ ಕಹಿ ಇದೆಯೆಂದಾದರೆ ಸಿಹಿಯೂ ಇರಬೇಕಲ್ಲವೇ? ‘ಅವರ ವ್ಯಕ್ತಿತ್ವದ ನೆರಳಿನಿಂದ ಹೊರಬರುವುದು, ಅವರ ಸಹವಾಸ ಮಾಡಿದ ಯಾರಿಗಾದರೂ ಕಷ್ಟ" ಅಂಥ, ದೊಡ್ಡವರ ವ್ಯಕ್ತಿತ್ವದ ವ್ಯಾಪ್ತಿ ಸೂಚಿಸುವಲ್ಲಿ ಅವರ ಬಗ್ಗೆ ಗೌರವವಿರುತ್ತದೆ. ನೆರಳಲ್ಲಿ ಏನೂ ಬೆಳೆಯುವುದಿಲ್ಲ ಎನ್ನುವಾಗ ನೆರಳಿನ, ಸರ್ವನಾಶದ ಗುಣ ನಮಗೆ ಗೊತ್ತಾಗುತ್ತದೆ.
ಚಿಕ್ಕಂದಿನಲ್ಲಿ ಸೂರ್ಯನೆದುರು ಕುಳಿತು, ಹಿಂದೆ ಬಿದ್ದ ನೆರಳನ್ನು ನೋಡುತ್ತಾ ಪುಳಕಗೊಂಡಿದ್ದು, ಮಧ್ಯಾಹ್ನದ ಊಟಕ್ಕೆ ಶಾಲೆಯ ಗಂಟೆ ಬಾರಿಸಲು ಶಾಲೆಯ ಪಕ್ಕದ ಹುಣಸೇ ಮರದ ನೆರಳು ನೋಡುತ್ತಿದ್ದುದು, ಅಪ್ಪ ನೆರಳನ್ನು ನೋಡಿ ತಿಂಡಿಯ ಹೊತ್ತು. ಊಟದ ಹೊತ್ತು, ಸಂಜೆಯಾಗುತ್ತಾ ಬಂತು. ಅಂಥ ಕಾಲವನ್ನು ಅಳೆಯುತ್ತಿದ್ದುದು ಈಗ ಕಂಡು, ಕೇಳಿದಂತಿದೆ. ಹಾಗೆಯೇ ವೇಳೆಯನ್ನು ಅಳೆಯುತ್ತಾ ಎಳೆಯ, ಯುವಕ, ಮುದುಕ ಸೂರ್ಯ ಅಂಥ ಆ ದಿನದ ಸೂರ್ಯನ ಆಯುಷ್ಯ ಅಳೆಯುತ್ತಿದ್ದುದು ಅರ್ಥವಾಗದೇ ನಿಂತ ನಮ್ಮ ಪುಟ್ಟ ಕಣ್ಣುಗಳಿಗೆ ಸೂರ್ಯ, ಭೂಮಿಯನ್ನೇ ಸುತ್ತುತ್ತಿದ್ದಾನೆ ಎನ್ನುವಂತೆ ಕಂಡಿದ್ದು ಎಂಥ ವಿಸ್ಮಯ! ತಮ್ಮ ಸುತ್ತಾಮುತ್ತಾ ಯಾರೂ ಇಲ್ಲದ ವೇಳೆಯಲ್ಲಿ ತಮ್ಮ ನೆರಳಿನೊಡನೆ ಆಟವಾಡುತ್ತಾ ಮೈಮರೆಯುವ ಮಕ್ಕಳಾಟವನ್ನು ಕಂಡವರಿಗೆ ಮಾತ್ರ ಹೇಳಲು ಸಾಧ್ಯ ತಮ್ಮ ನೆರಳನ್ನು ನೋಡಿಕೊಂಡು ಮೈಮರೆಯುವ ಹದಿಹರೆಯದವರಿಗೆನೂ ಕೊರತೆಯಿಲ್ಲ. ಕನ್ನಡಿ ಮುಂದೆಯೇ ಬಹುಪಾಲು ಸಮಯ ಕಳೆಯುವ ಹುಡುಗಿಯರು (ಹುಡುಗರೂ ಇದಕ್ಕೆ ಹೊರತಲ್ಲ) ನೆರಳಿನ ರೋಮಾಂಚನದಲ್ಲಿ ಕಾಲಕಳೆಯುವುದು ಅಪರೂಪವೆಂದೇ ಹೇಳಬೇಕು.
ನಮ್ಮ ಜನಪದರಂತೂ ನೆರಳಿನ ಉಪಮೆ ಬಳಸಿ ಪದ್ಯವನ್ನೇ ಕಟ್ಟಿ ಹಾಡಿದ್ದಾರೆ.
‘ಆಲಕ್ಕೆ ಹೂವಿಲ್ಲ
ಸಾಲಕ್ಕೆ ಕೊನೆಯಿಲ್ಲ
ಜಾಲಿಯ ನೆರಳು ನೆರಳಲ್ಲ ||ಪ||
ಹೆಣ್ಣಿಗೆ ತವರು ಸ್ಥಿರವಲ್ಲ’
ಇಲ್ಲಿ, ನೆರಳಿನ ಬಗೆಗೆ ನಮ್ಮ ಪೂರ್ವಿಕರಿಗಿದ್ದ ಸೂಕ್ಷ್ಮ ಮನೋಭಾವ ವ್ಯಕ್ತವಾಗುತ್ತದೆ. ಜಾಲಿಯ ನೆರಳು ಕನಿಷ್ಟದ್ದಾದರೆ, ತಂಪಾದ ನೆರಳಿಗೆ ಹೊಂಗೇ ಮರ ಬಿಟ್ಟು ಸಾಟಿ ಯಾವುದು? ವಸಂತ ಕಾಲದ ಹೊಂಗೇ ಮರದ ನೆರಳ ಆಹ್ಲಾದತೆಯನ್ನು ವರ್ಣಿಸಲು ಕವಿಗಳೇ ಬೇಕು. ಮರ ಕಡಿಯುವವನೊಬ್ಬ ಬಿಸಿಲಿನ ಬೇಗೆಗೆ ಹೆದರಿ ತಾನು ಮುಂದೆ ಕಡಿಯಲಿದ್ದ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು ನಂತರ ಅದೇ ಮರವನ್ನು ಕಡಿದ ಜಾನಪದ ಕಥೆಯೊಂದನ್ನು ಕೇಳುವ ಯಾರಿಗಾದರೂ ಮನುಷ್ಯನ ಸ್ವಾರ್ಥದ ಪರಿಚಯವಾಗುತ್ತದೆ. ಸುಖಕ್ಕೆ ಆಶ್ರಯಕ್ಕೆ ಮರದ, ವ್ಯಕ್ತಿಯ ನೆರಳು ಮನುಷ್ಯನಿಗೆ ಬೇಕು. ಆದರೆ ಒಂದು ಚಿಕ್ಕ ಗಿಡಕ್ಕೆ ದೊಡ್ಡ ಮರದ ನೆರಳು, ಅದರ ಭವಿಷ್ಯದ ದೀಪವನ್ನೇ ಆರಿಸಿಬಿಡಬಹುದು.
ವಯಸ್ಕ ರಸಿಕರಿಗೆ, ಪ್ರಾಯದ ಹುಡುಗ, ಹುಡುಗಿಯರಿಗೆ ತಾವು ರೋಮಾಂಚನಗೊಳ್ಳಲು ತಾವು ಇಷ್ಟಪಟ್ಟವರ ನೆರಳು ಸೋಕಿದರೇ ಸಾಕು. ಹಾಗೆಯೇ ಬದುಕಿನ ಸಂದರ್ಭದಲ್ಲಿ ಸಂಸ್ಕೃತಿ, ಅನುಭವಗಳ ದೃಷ್ಟಿಯಲ್ಲಿ ಹಿರಿಯ ತಲೆಮಾರಿನ ನೆರಳು, ಕಿರಿಯ ತಲೆಮಾರುಗಳ ಮೇಲೆ ಇರಬೇಕು, ಇರುತ್ತದೆ. ಪ್ರಾಯದಲ್ಲಿ ಹೆಂಡತಿಗೆ ಗಂಡನ ನೆರಳು, ವೃದ್ದಾಪ್ಯದಲ್ಲಿ ಗಂಡನಿಗೆ ಹೆಂಡತಿಯ ಆಶ್ರಯದ ನೆರಳೂ ಅವಶ್ಯಕ ಎಂಬ ಹಿರಿಯರ ಮಾತಿನ ಔಚಿತ್ಯ ರಕ್ಷಣೆ ಮತ್ತು ಆಸರೆ. ಜಗತ್ತಿನಲ್ಲಿ ಯಾವ ವಸ್ತುವಿಗೆ ನೆರಳಿಲ್ಲ? ಬೆಳಕಿದ್ದರೆ ಎಲ್ಲ ವಸ್ತುಗಳಿಗೂ ನೆರಳಿದೆ. ಎರಡು ಕೈಗಳು ಸೇರಿದರೆ ಚಪ್ಪಾಳೆ ಹೇಗೋ ಹಾಗೆ ಬೆಳಕು ಮತ್ತು ವಸ್ತು ನೆರಳ ಸೃಷ್ಟಿಗೆ ಅತ್ಯವಶ್ಯಕ.
ನಾವು ಇಷ್ಟಪಡುವ ವ್ಯಕ್ತಿಗಳು ನಮ್ಮ ಆಳಕ್ಕೆ ಹೇಗೋ ಇಳಿದು ತುಂಬಿಕೊಳ್ಳುವಂತೆ, ಪಾತ್ರೆಯಲ್ಲಿ ಹಾಕಿದ ನೀರು ಪಾತ್ರೆಯ ಆಕಾರ ಪಡೆಯುವಂತೆ, ಬೆಳಕು ಮತ್ತು ವಸ್ತುವನ್ನಾಧರಿಸಿ ನೆರಳನ್ನು ಮೂಡಿಸಬಹುದಲ್ಲವೇ? ಆದರೆ ನೆರಳಿನ ಉದ್ದ, ತುಂಡ ಮುಂತಾದ ಏರಿಳಿತಗಳಿಗೆ ಬೆಳಕಿನ ಕೋನ ಮತ್ತು ದಿಕ್ಕುಗಳು ಮುಖ್ಯ. ಆದರೆ ನೆರಳಿನ ಹಂಗಿನಿಂದ ದೇವತೆಗಳ ದೇಹ ದೂರವಂತೆ. ಹಾಗಾಗಿ ಅವರಿಗೆ ನೆರಳಿರುವುದಿಲ್ಲವಂತೆ ! ಹಾಗಾದರೆ ತಮ್ಮ ದೇಹದ ಆಕಾರ ಬದಲಿಸಿಕೊಳ್ಳಲು ದೆವ್ವಗಳಿಗೆ, ರಾಕ್ಷಸರಿಗೆ ಸಾಧ್ಯ ಎಂಬ ಪುರಾಣದ ಕಥೆಗಳ ಹಿನ್ನಲೆಯಲ್ಲಿ, ಅವುಗಳಿಗೆ ನೆರಳಿದ್ದರೆ ಯಾವ ತರಹದ ನೆರಳಿರಬಹುದು? ‘ಶನಿದೇವಾ ನಿನ್ನ ಕರಿನೆರಳು ನಮ್ಮ ಮೇಲೆ ಬೀಳದಿರಲಿ’ ಅಂಥ ಶನಿಮಹಾತ್ಮನನ್ನು ಪ್ರಾರ್ಥಿಸುವಲ್ಲಿ ಜನ ಯಾವ ರೀತಿಯ ನೆರಳು ಬೇಡ ಎನ್ನುತ್ತಾರೆ? ಯಾವ ರೀತಿಯ ನೆರಳಿಗೆ ಮೊರೆಯಿಡುತ್ತಾರೆ? ಹಾಗಾದರೆ ಕಹಿ (ಸೋಲು) ಸಿಹಿ (ತಂಪು) ನೆರಳುಗಳಂತೆ ಕರಿನೆರಳು ಕೆಟ್ಟ ದೃಷ್ಟಿಯನ್ನು ಸೂಚಿಸುವುದಾದರೆ ಒಳ್ಳೆಯದನ್ನುಂಟು ಮಾಡುವ ನೆರಳನ್ನು ಯಾವ ಬಣ್ಣದಿಂದ ಕರೆಯಬೇಕೆನ್ನುವುದು ಪ್ರಶ್ನೆ.
ಸೂರ್ಯ, ಚಂದ್ರರ ಗ್ರಹಣಕ್ಕೆ ಕಾರಣವಾಗುವ ಭೂಮಿ, ಸೂರ್ಯ, ಚಂದ್ರರ ಪರಸ್ಪರ ನೆರಳುಗಳು, ಕಪ್ಪೆಯ ಮೇಲೆ ಹಾವಿನ ನೆರಳು, ಹಾವಿನ ಮೆಲೆ ಹದ್ದಿನ ನೆರಳು, ಶಿಷ್ಯನ ಮೇಲೆ ಗುರುವಿನ ನೆರಳು ಮುಂತಾದವುಗಳ ಪರಿಕಲ್ಪನೆ ಮತ್ತು ವಾಸ್ತವಗಳು ನೆರಳನ್ನು ಉಪಮೆಗಳಾಗಿ ಉಪಯೋಗಿಸಿಕೊಳ್ಳುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಿವೆ. ಮಳೆಗಾಲದಲ್ಲಿ ಮೂಡುವ ಕಾಮನ ಬಿಲ್ಲೂ ಕೂಡಾ ನೆರಳು ಬೆಳಕಿನ ಆಟದಿಂದಲೇ ಸೃಷ್ಠಿಯಾಗುವ ಒಂದು ಅದುತ ವಿಸ್ಮಯ ಹಾಗೆಯೇ ಸೂರ್ಯನ ಬಿಳಿ ಬೆಳಕು ಪಟ್ಟಕದ ಮೂಲಕ ಹಾಯ್ದು ಹೋದಾಗ ಬೆಳಕು ಏಳು ಬಣ್ಣಗಳಾಗಿ ಒಡೆಯುತ್ತದೆ. ಬೆಳಕು ವಸ್ತುವಿನ ಮೂಲಕ ತೂರಿದಾಗ ಉಂಟಾಗುವ ಈ ಕ್ರಿಯೆಗಳೂ ಕೂಡಾ ಒಂದು ತರಹದ ನೆರಳನ್ನು ಸೃಷ್ಟಿಸುವ ವಿಧಾನಗಳಾಗಿವೆ. ಬೆಳಕು ವಸ್ತುವಿನ ಮೂಲಕ ತೂರಿ ಹೋಗದೆ ಇದ್ದಾಗ ಉಂಟಾಗುವ ನೆರಳು ಒಂದು ಅರ್ಥದಲ್ಲಿ ಏನನ್ನೂ ಬಿಚ್ಚಿಡುವುದಿಲ್ಲ. ಹಾಗೆಯೇ ಏನನ್ನೂ ಮುಚ್ಚಿಡುವುದಿಲ್ಲ. ಬೆಳಕಿಗೆ ಒಗ್ಗಿಕೊಂಡ ಎಲ್ಲಾ ಭಾಗ ಕಾಣುತ್ತದೆ. ಬೆಳಕಿನ ಕೋನ, ದಿಕ್ಕು ಹಾಗೂ ವಸ್ತುವಿನಿಂದ ಬೆಳಕಿನ ಮೂಲಕ್ಕಿರುವ ಅಂತರವನ್ನು ಆಧರಿಸಿ ವಸ್ತುವಿ ನೆರಳನ್ನೇ ಹತ್ತಾರು ವಿಧವಾಗಿ ಮೂಡಿಸಬಹುದು. ಹೀಗೆ ವಸ್ತುವೊಂದರ ಹೊರ ಆಕಾರವನ್ನು ಭೂಮಿಯ ಮೇಲೆ ಆ ವಸ್ತುಗಳ ನೆರಳಿನ ಸಹಾಯದಿಂದ ಬಿಡಿಸುವ ಕಲೆ ಬಹುಶಃ ಈಗಿನ ಚಿತ್ರ ಕಲೆಗೆ ಕಾರಣವಾಗಿರಲೂಬಹುದಲ್ಲವೇ?
ನಮ್ಮ ಆಧುನಿಕ ಜಗತ್ತಿನಲ್ಲಿ ಮಸೂರಗಳ ಸಹಾಯದಿಂದ, ನೆರಳು ಬೆಳಕಿನ ಸಂಯೋಜನೆಯ ಹೊಸ ಕಲಾ ಜಗತ್ತೇ ಸೃಷ್ಠಿಯಾಗಿದೆ. ಈ ದೃಷ್ಠಿಯಿಮದ ಇಂದಿನ ಸಿನಿಮಾ ಕಲ್ಪನೆ ಕೂಡಾ ನೆರಳು ಬೆಳಕಿನ ಆಟದ ಒಂದು ಮಜಲು ಮಾತ್ರ. ಇಷ್ಟಲ್ಲದೆ ಬೆಳಕಿನಲ್ಲಿ ತಮ್ಮ ಕೈಕಾಲು ಹಾಗೂ ದೇಹದ ವಿವಿಧ ಭಾಗಗಳ ಚಲನೆಯಿಂದ ವಿವಿಧ ಆಕಾರ, ಪ್ರಾಣಿ, ಪಕ್ಷಿಗಳ ಆಕಾರ ಹಾಗೂ ಅವುಗಳ ನಡವಳಿಕೆ, ಚಟುವಟಿಕೆಯನ್ನು ಗೋಡೆ, ಪರದೆಗಳ ಮೇಲೆ ಮೂಡಿಸುತ್ತಾರೆ. ಹೀಗೆಯೇ ಹೊಸ ಕಲೆಯೊಂದನ್ನು ಸೃಷ್ಠಿಸಿರುವ ಆಧುನಿಕ ಭೂಪರು ನೆರಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮನುಷ್ಯನ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣಿನ ರಚನೆ ಹಾಗೂ ಕ್ರಿಯೆ ನೆರಳು-ಬೆಳಕನ್ನು ಆಧರಿಸಿದೆ ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು.
ಪುರಾಣದ ಕಥೆಗಳಲ್ಲೊಂದಾದ ಮಹಾಭಾರತದಲ್ಲಿ, ನೆರಳು, ಕಥೆಯ ದಿಕ್ಕನ್ನೇ ಬದಲಿಸುವ ಮಹತ್ವ ಪಡೆದುಕೊಂಡಿದೆ. ಚಕ್ರವ್ಯೂಹದಲ್ಲಿ ಮೋಸಕ್ಕೆ ಬಲಿಯಾದ ಅಭಿಮನ್ಯು, ಅವನನ್ನು ಕೊಂದ ಜಯದ್ರಥನನ್ನು ‘ನಾಳೆಯ ಸೂರ್ಯ ಮುಳುಗುವುದರೊಳಗಾಗಿ ಹತ್ಯೆ ಮಾಡುತ್ತೇನೆ" ಎಂದು ಪ್ರತಿe ಮಾಡುವ ಅರ್ಜುನನ ಶಪಥ ಈಡೇರದ ಸ್ಥಿತಿ ಬಂದಾಗ, ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಿಡಿದು ಚಕ್ರದ ನೆರಳಿನಿಂದ ಇಡೀ ಜಗತ್ತನ್ನು ಕತ್ತಲಲ್ಲಿ ಮುಗಿಸಿದ ನಂತರ ಅರ್ಜುನ ಮೋಸದ ಜಯದ್ರಥನನ್ನು ಮೋಸದಿಂದಲೇ ಹತ್ಯೆ ಮಾಡಿದನೆಂಬ ಕಥೆಯನ್ನು ಯಾರು ಕೇಳಿಲ್ಲ? ಗೌರಿ ತನ್ನ ತವರಿಗೆ ಹೋಗಬೇಕಾಗಿ ಬಂದಾಗ ತನ್ನ ನೆರಳಿಗೆ ಜೀವ ತುಂಬಿ ಇಟ್ಟು ಹೋದದ್ದರಿಂದ ಅದು ಶಿವನೊಡನೆ ಸಮಾಗಮಿಸಿ ಷಣ್ಮುಖನ ಹುಟ್ಟಿಗೆ ಕಾರಣವಾಯಿತು ಎಂನಲ್ಲಿ ನೆರಳನ್ನು ಪೌರಾಣಿಕವಾಗಿ ಬಳಸಿಕೊಂಡಿರುವುದರ ಹಿಂದಿನ ಮರ್ಮವನ್ನು ಅರಿತವರಿಗಷ್ಟೇ ನೆರಳ ಮಹತ್ವ ತಿಳಿಯುತ್ತದೆ.
ನೀರಿನ ಮೇಲೆ ಬೀಳುವ ನೆರಳು ಅಲೆಗಳಿಗನುಗುಣವಾಗಿ ನಡುಗುವಂತೆ, ಛಿದ್ರವಾದಂತೆ ತೋರುತ್ತದೆ. ಭೂಮಿ, ಬಂಡೆಯ ಮೇಲೆ ಬೀಳುವ ನೆರಳು, ಗಾಳಿಗೆ ಮರ ಅಲುಗಾಡಿದಂತೆ ತನ್ನ ನೃತ್ಯವನ್ನು ಪ್ರಾರಂಭಿಸುತ್ತದೆ. ಹೀಗೆ ನಡುಗುವ ನೆರಳು ನೀರಮೇಲೆ ಬಿದ್ದರೆ ಸ್ಪಷ್ಟವಾಗಿ ನೋಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ವಸ್ತುವೊಂದರ ನೆರಳು ನೀರ ಮೇಲೆ ಬೀಳುವ ವೇಳೆಯಲ್ಲಿ ನೀರು ಶುದ್ಧವಾಗಿದ್ದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವಿನ ಬಿಂಬವೂ ಮೂಡುತ್ತದೆ. ನೆರಳಿಗೂ, ಬಿಂಬಕ್ಕೂ ಸಂಬಂಧವಿಲ್ಲವಾದರೂ, ಕೆಲವು ವ್ಯತ್ಯಾಸಗಳಂತೂ ಇವೆ. ಬೆಳಕಿಗೆ ನಿಂತ ಕ್ಷಣ ನೆರಳು ಕಾಣುವಂತೆ ಕನ್ನಡಿ ಮುಂದೆ ನಿಂತ ಕ್ಷಣ ಬಿಂಬ ಕಾಣುತ್ತದೆ. ನೆರಳು ವಸ್ತುವಿನಿಂದ ಉದ್ದವಾಗಬಲ್ಲದು, ಇಲ್ಲ ಕುಬ್ಜವಾಗಬಲ್ಲದು. (ಸೂರ್ಯನ ಚಲನೆಯನ್ನನುಸರಿಸಿ) ಆದರೆ ಬಿಂಬದ ಗಾತ್ರ, ಉದ್ದ, ತುಂಡ ಅಳತೆಗಳು ಕನ್ನಡಿಯ ಮಸೂರವನ್ನು ಅವಲಂಬಿಸಿರುತ್ತವೆ. ಕನ್ನಡಿಯ ಮುಂದೆ ನಿಂತು ನಾವು ಚಲಿಸಿದರೂ ಬಿಂಬ ಉದ್ದ, ತುಂಡ ಆಗುತ್ತದಾದರೂ ಅದು ಗೌಣ. ಬಹುಶಃ ನೆರಳಿಗೆ ಸವತಿಯಿದ್ದರೆ ಅದು ಬಿಂಬ ಮಾತ್ರ. ಕನ್ನಡಿ ಬಂದದ್ದರಿಂದ ಜನ ತಮ್ಮ ನೆರಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟಿರಬೇಕು.
ಕನ್ನಡಿಯಿಲ್ಲದಿದ್ದ ಕಾಲದಲ್ಲಿ ಜನ ತಮ್ಮ ಮುಖವನ್ನು ಹೇಗೆ ನೋಡಿಕೊಳ್ಳುತ್ತಿದ್ದರು? ಎನ್ನುವುದು ಪ್ರಶ್ನೆಯಾದರೂ ಅವರು ನೆರಳು ನೋಡಿ ತಮ್ಮ ಸೌಂದರ್ಯವನ್ನು ಅಳೆದುಕೊಳ್ಳುತ್ತಿದ್ದರು ಎನ್ನುವುದು ಸತ್ಯಕ್ಕೆ ಹತ್ತಿರವಾದದ್ದು ಎನ್ನಬಹುದಾದರೂ ನೆರಳೇ ಸೌಂಧರ್ಯದ ಮಾನದಂಡವಾಗಿತ್ತು ಎಂಬುದು ತಪ್ಪಾಗುತ್ತದೆ. ಮನುಷ್ಯ ನೆರಳನ್ನು ನೋಡುವುದನ್ನು ಬಿಟ್ಟಿದ್ದರೆ ಅದು ಕನ್ನಡಿ ಬಂದಂದಿನಿಂದ ಮಾತ್ರ ಎಂದು ಧಾರಾಳವಾಗಿ ಹೇಳಬಹುದೇನೋ. ನೆರಳನ್ನೇ ನಂಬಿಕೊಂಡಿದ್ದ ಕಾಲದಲ್ಲಿ ಕನ್ನಡಿ ಬಂದು, ಅದನ್ನು ಮುದುಕನೊಬ್ಬ ಬಚ್ಚಿಟ್ಟುಕೊಂಡು ನೋಡಿಕೊಳ್ಳುತ್ತಿದ್ದುದನ್ನು ಕಂಡ ಅಜ್ಜಿ, ಅಜ್ಜನಿಲ್ಲದಾಗ ಕನ್ನಡಿಯಲ್ಲಿ ಬಗ್ಗಿ ನೋಡಿ ತನ್ನ ಯಜಮಾನ ಬೇರೊಬ್ಬಳನ್ನು ಇಟ್ಟುಕೊಂಡಿದ್ದಾನೆ ಅಂತ ರಂಪ ಮಾಡಿದ ಜಾನಪದ ಕಥೆಯನ್ನು ಯಾರು ಕೇಳಿಲ್ಲ?
ಪ್ರಾಯದ ಹುಡುಗ, ಹುಡುಗಿಯರು ಕನ್ನಡಿ ಮುಂದೆ ಸವೆಸುವ ಕಾಲದ ಒಂದಂಶವನ್ನಾದರೂ ನೆರಳನ್ನು ನೋಡುತ್ತಾ ಸವೆಸುತ್ತಾರೆಯೆ? ನೆರಳಿಗೆ ಬಂದಿರುವ ಕುತ್ತನ್ನು ನೋಡಿ! ಅದಕ್ಕಾಗಿಯಾದರೂ ನೆರಳಿಗೆ ಈಗ ತನ್ನನ್ನು ನೋಡಿಕೊಳ್ಳುವ ನಿಮ್ಮ ನೆರಳಿನಾಸರೆ ಬೇಕಾಗಿದೆಯಲ್ಲವೇ?
೨೮ ಮೇ ೨೦೦೦ದ ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
೨೮ ಮೇ ೨೦೦೦ದ ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
Wednesday, 30 June 2010
ಫ್ರೀಡ್ಮನ್ ಮತ್ತು ನಿಲೇಕಣಿ ಜತೆ ಒಂದು ಸಂಜೆ
ಕಳೆದ ಸೋಮವಾರ (೦೯ ಫೆ. ೨೦೦೯) ಸಂಜೆ ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.
‘ಇಮ್ಯಾಜಿನಿಂಗ್ ಇಂಡಿಯಾ ಇನ್ ಎ ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್ ವರ್ಲ್ಡ್’ ಎಂಬ ವೇದಿಕೆ ಮೇಲೆ ಇವರನ್ನು ಮುಖಾಮುಖಿ ಮಾಡಿಸಿದ್ದು ಪೆಂಗ್ವಿನ್ ಮತ್ತು ಎನ್ಡಿಟಿವಿ. ಇದು ಪೆಂಗ್ವಿನ್ ಇತ್ತೀಚೆಗೆ ಪ್ರಕಟಿಸಿರುವ ನಿಲೇಕಣಿ ಅವರ ‘ಇಮ್ಯಾಜಿನಿಂಗ್ ಇಂಡಿಯಾ’ ಫ್ರೀಡ್ಮನ್ ಅವರ ಇತ್ತೀಚಿನ ಕೃತಿ ‘ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್’ ಪುಸ್ತಕಗಳನ್ನು ಪ್ರಮೋಟ್ ಮಾಡಲು ಏರ್ಪಡಿಸಿದ್ದ ಕಾರ್ಯಕ್ರಮವಾದರೂ ಅಲ್ಲಿ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಇಬ್ಬರೂ ಒಂದೂವರೆ ಗಂಟೆ ನಿರರ್ಗಳವಾಗಿ ಅಭಿಪ್ರಾಯ ಹಂಚಿಕೊಂಡರು. ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು. ಎಂದಿನಂತೆ ಎನ್ಡಿಟಿವಿಯ ದೊಡ್ಡ ಗಂಟಲಿನ ಬರ್ಕಾ ದತ್ ಈ ಇಬ್ಬರು ಐಕಾನ್ಗಳನ್ನೂ ಮತ್ತು ಪ್ರೇಕ್ಷಕರನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದೊಂದು ಅಪರೂಪದ ಸಂಜೆ.
ನೂಯಾರ್ಕ್ ಟೈಮ್ಸ್ನಲ್ಲಿ ಪತ್ರಕರ್ತನಾಗಿ ಮಾಡಿದ ಕೆಲಸಕ್ಕೆ ಮೂರು ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ, ಥಾಮಸ್ ಫ್ರೀಡ್ಮನ್ ಮತ್ತು ನಂದನ್ ನಿಲೇಕಣಿ ಅವರು ಜತೆಗಿನ ಸಂವಾದದಲ್ಲಿ ಜಾಗತಿಕ ತಾಪಮಾನ ಏರಿಕೆ, ಹಣಕಾಸು ಹಿಂಜರಿತ, ಜಾಗತೀಕರಣ, ಎನರ್ಜಿ ಟೆಕ್ನಾಲಜಿ, ಪ್ರಜಾಪ್ರಭುತ್ವ, ಕಾನೂನು, ಸ್ಲಮ್ಡಾಗ್ ಮಿಲೆನಿಯರ್, ಭಯೋತ್ಪಾದನೆ ಮತ್ತು ಯುದ್ಧ ಮುಂತಾದ ಅನೇಕ ವಿಷಯಗಳು ಬಂದವು. ಇಬ್ಬರೂ ಒಟ್ಟಾಗಿ ಒತ್ತಿ ಒತ್ತಿ ಜಪಿಸಿದ ಮಂತ್ರ ‘ಆಶಾವಾದ’. ಇದೊಂದೇ ಆರ್ಥಿಕ ಹಿಂಜರಿತದಿಂದ ಪ್ರಪಂಚವೇ ತತ್ತರಿಸಿರುವಾಗ ಎಲ್ಲರೂ ಗುರಿಮುಟ್ಟಲು ಇರುವ ಏಕೈಕ ಮಾರ್ಗ ಎಂದು ಹೇಳಿದ್ದು ಆ ಅರ್ಥಪೂರ್ಣ ಮಾತುಕತೆಯ ಒಟ್ಟು ಸಾರಾಂಶದಂತಿತ್ತು.
ಲಘುಹಾಸ್ಯದ ಧಾಟಿಯಲ್ಲೇ ಬರ್ಕಾ ಮತ್ತು ಪ್ರೇಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀಡ್ಮನ್ಎಲ್ಲರ ಮನ ಗೆದ್ದರು. ನಮ್ಮೆಲ್ಲಾ ತಂತ್ರಜ್ಞಾನ ಪರಿಸರದ ಜೀವವೈವಿಧ್ಯ (ಈಕೋ ಸಿಸ್ಟಮ್) ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಬೇಕು. ಆರ್ಥಿಕ ಸ್ಥಿರತೆಗೆ ಇಂಧನ ತಂತ್ರಜ್ಞಾನ (ಎನರ್ಜಿ ಟೆಕ್ನೋಲಜಿ) ಹೊಸ ಮಂತ್ರವಾಗಬೇಕು. ಆರ್ಥಿಕ ಪಾರುಗಾಣಿಕೆಯಷ್ಟೇ ಮುಖ್ಯವಾಗಿ ತಕ್ಷಣ ಗಮನಹರಿಸಬೇಕಿರುವುದು ಇಂಧನ ತಂತ್ರಜ್ಞಾನ. ಅದು ಬೆಳೆಯದೇ ಹೋದರೆ ಇನ್ನೊಂದು ಕೈಗಾರಿಕಾ ಕ್ರಾಂತಿ ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಆಂತರಿಕ ಸ್ವಾತಂತ್ರ್ಯದ ಕೊರತೆ, ಮಹಿಳೆಯರ ಬಲವರ್ಧನೆ ಆಧುನಿಕ ಶಿಕ್ಷಣಗಳ ಬಗ್ಗೆ ತಕ್ಷಣ ಗಮನ ನೀಡಬೇಕು. ಎಲ್ಲರೂ ಸ್ವತಂತ್ರವಾಗಿ ನಡೆದಾಡಲು, ಮಾತನಾಡಲು ಅಲ್ಲಿರುವ ಉಸಿರುಗಟ್ಟುವ ವಾತಾವರಣವನ್ನು ತಿಳಿಗೊಳಿಸದೆ ಜಗತ್ತಿನೊಟ್ಟಿಗೆ ಶಾಂತಿಯುತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಸ್ಥಳೀಯ ಶಕ್ತಿಯನ್ನು ಜಾಗತೀಕರಣಗೊಳಿಸುವ ಮೂಲಕ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಬೆಂಗಳೂರಿಗಿದೆ. ಅಮೆರಿಕ ಇಂಥದೇ ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆದಿದೆ. ಇಂತಹ ಅವಕಾಶ ಬಂದರೆ ಬೆಂಗಳೂರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೆರಿಕ ಕೂಡ ತಲೆತಲಾಂತರದಿಂದ ನಿರ್ಲಕ್ಷಿಸಿರುವ ಪರಿಸರ, ಇಂಧನ, ವಲಸೆ, ವೃದ್ಧಾಪ್ಯ ಪಿಂಚಣಿ ಮತ್ತು ಆರೋಗ್ಯ ಸಂಬಂ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿರುವುದು ತುರ್ತು. ಸ್ಲಮ್ಡಾಗ್ ಮಿಲೆನಿಯರ್ ಚಿತ್ರವನ್ನು ಕೇವಲ ಕಲೆಯಾಗಿ ಮಾತ್ರ ನೋಡಬೇಕು. ಭಾರತದ ಸ್ವಾತಂತ್ರ್ಯ ಆತ್ಮವಿಶ್ವಾಸಗಳನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು ಫ್ರೀಡ್ಮನ್. ತಮ್ಮ ಹೆಸರಾಂತ ಪುಸ್ತಕ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಗೆ ಆ ಹೆಸರು ಇಡಲು ನಿಲೇಕಣಿ ಕಾರಣ ಎಂದ ಫ್ರೀಡ್ಮನ್, ನಂದನ್ ಅವರನ್ನು ಸಂದರ್ಶಿದಾಗ ಅವರು ಹೇಳಿದ ‘ದಿ ಪ್ಲೇಯಿಂಗ್ ಫೀಲ್ಡ್ ಈಸ್ ಬೀಯಿಂಗ್ ಲೆವೆಲ್ಡ್’ ಎಂಬ ಉಕ್ತಿಯೇ ಅಂತಿಮವಾಗಿ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಎಂಬ ಹೆಸರಿನ ಉಗಮಕ್ಕೆ ಕಾರಣವಾಯಿತು ಎಂದು ವಿವರಿಸಿದರು.
ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಲಘು ಧಾಟಿಯಲ್ಲಿ ಉತ್ತರಿಸಲು ನಂದನ್ ಕೂಡಾ ಹಿಂದೆ ಬೀಳಲಿಲ್ಲ. ಸತ್ಯಂನ ಹಗರಣದ ಮೂಲ ‘ರಿಯಲ್ ಎಸ್ಟೇಟ್’ ಎಂಬ ಚಟಾಕಿ ಹಾರಿಸಿದ ನಿಲೇಕಣಿ, ಇಂಥ ಹಗರಣಗಳು ಭಾರತದ ಐಟಿ ಉದ್ಯಮ ತನ್ನ ಬದ್ಧತೆ ಮತ್ತು ಪಾರದರ್ಶಕತೆಯನ್ನು ಪುನಾ ನಿರೂಪಿಸಬೇಕಾದ ಸ್ಥಿತಿಗೆ ದೂಡಿದೆ. ಹಗರಣ ಭಾರತಕ್ಕೆ ಕಪ್ಪು ಚುಕ್ಕೆಯಾದರೂ ಅದು ವಿಶ್ವಾಸಾರ್ಹತೆಗೆ ದೊಡ್ಡ ಹಾನಿ ಮಾಡಲಾರದು. ಆದರೆ ಇನ್ನು ೩೦ ವರ್ಷಗಳನಂತರ ಭಾರತಕ್ಕೆ ಸಿಗುವ ಮಾನವಶಕ್ತಿ (ಹ್ಯೂಮನ್ ಕ್ಯಾಪಿಟಲ್)ಯ ಲಾಭ ಬೇರೆ ಯಾವುದೇ ದೇಶಕ್ಕೆ ಸಿಗಲು ಸಾಧ್ಯವಿಲ್ಲ. ಆಗ ದೇಶದ ಯುವಜನರೇ ಬಹುಸಂಖ್ಯಾತರಾಗಿರುತ್ತಾರೆ. ಇದನ್ನೇ ಡೆಮೋಗ್ರಾಫಿಕ್ ಡಿವಿಡೆಂಡ್ ಎಂದು ಕರೆದರು ನಿಲೇಕಣಿ. ಒಂದು ದೇಶದ ಚರಿತ್ರೆಯಲ್ಲಿ ಒಮ್ಮೆ ಮಾತ್ರ ಬರುವ ಸುವರ್ಣ ಅವಕಾಶ ಇದು. ಭಾರತದಲ್ಲಿ ಹುಟ್ಟುವ ಮಕ್ಕಳ ಅನುಪಾತ ಕ್ರಮೇಣ ಕಡಿಮೆಯಾಗುತ್ತಿದ್ದು ಹಿರಿಯರ ಸಂಖ್ಯೆಯೂ ಕುಗ್ಗಲಿದೆ ಆಗ ದೇಶದ ಸಮಗ್ರ ಬೆಳವಣಿಗೆ ಭರದಿಂದ ಸಾಗುತ್ತದೆ. ಹಗರಣಗಳಲ್ಲಿ ಭಾರತವೇನೂ ಏಕಸ್ವಾಮ್ಯತೆ ಸಾಸಿಲ್ಲ ಏಕೆಂದರೆ ಅಮೆರಿಕದಲ್ಲೂ ಹಗರಣಗಳಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಒಂದು ಹಗರಣದ ಆರೋಪಿಯನ್ನು ತಿಂಗಳುಗಳೇ ಕಳೆದರೂ ಬಂಸಿಲ್ಲ. ಆದರೆ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥನನ್ನು ಹಗರಣ ಹೊರಬಿದ್ದ ಮೂರು ದಿನಗಳಲ್ಲಿ ಬಂಸಲಾಯಿತು. ಇದು ಭಾರತ ಹೊಂದಿರುವ ನ್ಯಾಯ ವ್ಯವಸ್ಥೆಯ ಸಂಕೇತ. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದರು.
ಭಾರತದ ಪ್ರತಿ ಮನುಷ್ಯ ಎರಡು ಟನ್ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ, ಅದೇ ಅಮೆರಿಕದಲ್ಲಿ ಪ್ರತಿಯೊಬ್ಬನೂ ೨೦ ಟನ್ ಸೇರಿಸುತ್ತಿದ್ದಾನೆ. ಆದರೂ ಭಾರತ ಕಾರ್ಬನ್ ನಿಯಂತ್ರಣದ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಭಾರತ ಅವಕಾಶಗಳ ಬಾಂಬ್ ಮೇಲೆ ಕುಳಿತಿದೆ ಆದರೆ ಅದಕ್ಕೆ ಇಚ್ಛಾಶಕ್ತಿ ಇರುವ ನಾಯಕತ್ವದ ಕೊರತೆ ಮತ್ತು ರಾಜಕೀಯ ಕ್ಷೋಭೆ ದೊಡ್ಡ ತೊಡಕುಗಳಾಗಿವೆ. ಭಾರತ ಇತರ ಆರ್ಥಿಕ ಮೂಲಗಳ ಕಡೆಯೂ ಗಮನಹರಿಸಬೇಕೆಂಬ ಪಾಠವನ್ನು ಈ ಹಿಂಜರಿತದಿಂದ ಕಲಿಯಬೇಕು ಹಾಗೆಯೇ ಇತರ ಮೂಲಸೌಕರ್ಯಗಳ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕು. ಸ್ಲಮ್ಡಾಗ್ ಮಿಲೆನಿಯರ್ನಲ್ಲಿ ಭಾರತವನ್ನು ಚಿತ್ರಿಸಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಅದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳಬೇಕಾಗಿಲ್ಲ. ಅದನ್ನು ಚಿತ್ರವಾಗಿಯಷ್ಟೇ ನೋಡಬೇಕು ಏಕೆಂದರೆ ಆ ಸಿನಿಮಾ ಇಡೀ ಭಾರತದ ಚಿತ್ರಣ ನೀಡುವುದಿಲ್ಲ. ಆ ಚಿತ್ರದಲ್ಲಿ ಚಿತ್ರಿಸಿರುವುದಕ್ಕಿಂತ ಭಾರತ ಹೆಚ್ಚು ವೈವಿಧ್ಯಮಯ ಮತ್ತು ಸಂಕೀರ್ಣವಾಗಿಯೂ ಇದೆ ಎಂದರು ನಿಲೇಕಣಿ.
ಕಾರ್ಯಕ್ರಮದ ನಂತರ, ತಾವು ಕೊಂಡ ಪುಸ್ತಕದಲ್ಲಿ ಅವರಿಬ್ಬರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಎರಡು ಉದ್ದದ ಸಾಲುಗಳಲ್ಲಿ ನಿಂತಿದ್ದರು. ನನ್ನ ಸರದಿಯಲ್ಲಿ ಫ್ರೀಡ್ಮನ್ ಅವರಿಗೆ ವಿಜಿಟಿಂಗ್ ನೀಡಿ ಪರಿಚಯಿಸಿಕೊಂಡೆ. ಮುಗುಳ್ನಕ್ಕು, ಹಾಯ್ ನೈಸ್ ಮೀಟಿಂಗ್ ಯೂ ಅಂದರು. ದೊಡ್ಡ ಅಂಕಣಕಾರ,ಲೇಖಕ, ಪತ್ರಕರ್ತನ ಜತೆ ಏನು ಮಾತನಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪುಸ್ತಕದಲ್ಲಿ ಸುಮ್ಮನೆ ಸಹಿ ಹಾಕಿಕೊಡುತ್ತಾರೆ ಎಂದು ಎಣಿಸಿದ್ದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದುದಷ್ಟೇ ಅಲ್ಲದೆ ಅವರು ಹೇಳಿದ ವಿಷಯಗಳನ್ನು ಅವರವರ ವಿಜಿಟಿಂಗ್ ಕಾರ್ಡ್ನಲ್ಲಿ ದಾಖಲಿಸಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ಜಾಗವಿಲ್ಲದ ವಿಜಿಟಿಂಗ್ ಕಾರ್ಡ್ಗಳ ಮೂಲೆಮೂಲೆಗಳಲ್ಲೂ ಬರೆದುಕೊಳ್ಳುತ್ತಿದ್ದರು. ನೂಯಾರ್ಕ್ಟೈಮ್ಸ್ನ ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ ಅಂದೆ. ವೆರಿಮಚ್ ಅಪ್ರಿಷಿಯೇಟೆಡ್ ಅಂದರು. ಸೋ.., ಎಂದು ಮಾತು ಮುಂದುವರಿಸುವಂತೆ ಸೂಚಿಸಿದರು. ಹಣಕಾಸು ಹಿಂಜರಿತದ ಸಮಯದಲ್ಲಿ ಬೇಲೌಟ್(ಪಾರುಗಾಣಿಕೆ) ಬಗ್ಗೆ ನೀವು ತಳೆದಿದ್ದ ನಿಲುವು ನನಗೆ ತುಂಬ ಇಷ್ಟವಾಯಿತು ಎಂದೆ. ಹೇಗೆ ಎಂಬಂತೆ ನೋಡಿದರು. ಉತ್ತಮ ಶಕ್ತಿಯುತ ಸೋಲಾರ್ ಕಾರುಗಳನ್ನು ಸಂಶೋಸಲು ಹಣ ವಿನಿಯೋಗಿಸುವ ಬದಲು ಔಟ್ಡೇಟೆಡ್ ಆಗುತ್ತಿರುವ ಕಾರುಗಳನ್ನು ತಯಾರಿಸುವ ಕಂಪನಿಗಳಿಗೆ ಹಣದ ನೆರವು (ಪಾರುಗಾಣಿಕೆ)ನೀಡುವುದು ಡಿವಿಡಿಗಳು ಔಟ್ಡೇಟೆಡ್ ಆಗುವಾಗ ಕ್ಯಾಸೆಟ್ ತಯಾರಿಕೆಗೆ ಹಣ ಕೊಟ್ಟಂತೆ ಎಂಬ ನಿಮ್ಮ ಅಭಿಪ್ರಾಯದ ಹಿಂದಿನ ಲಾಜಿಕ್ ತುಂಬಾ ಚನ್ನಾಗಿದೆ ಎಂದು ಹೇಳಿದೆ. ಥ್ಯಾಂಕ್ಯು, ಥ್ಯಾಂಕ್ಯು ವೆರಿಮಚ್ ಅಂದು ನನ್ನ ವಿಜಿಟಿಂಗ್ ಕಾರ್ಡ್ ಮೇಲೆ ಏನನ್ನೋ ಗೀಚಿಕೊಂಡರು. ಗಂಭೀರವಾಗಿ ಮಾತನಾಡುತ್ತಲೇ ಆಟೋಗ್ರಾಫ್ ಹಾಕಿಕೊಟ್ಟು ಇನ್ನೊಬ್ಬರನ್ನು ಸ್ವಾಗತಿಸುವಂತೆ ಆ ಕಡೆ ನಗೆ ಬೀರಿದರು.
೨೨ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾರತಕ್ಕೊಂದು ಪಾರುಗಾಣಿಕೆ ನೀತಿ ಬೇಕೆ?
ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ಅರ್ಥಕೋಶಕ್ಕೆ ಜಾಗತೀಕರಣದ ತೀರಾ ಇತ್ತೀಚಿನ ಕೊಡುಗೆ ಪಾರುಗಾಣಿಕೆ (ಬೇಲ್ಔಟ್) ಎಂಬ ಪದ. ಬೇಲ್ಔಟ್ಗೆ ಕನ್ನಡದಲ್ಲಿ ಇತ್ತೀಚಿಗೆ ನಾವೇ ಕಂಡುಕೊಂಡಿರುವ ಪದ ಪಾರುಗಾಣಿಕೆ. ಕಂಪನಿ ಅಥವಾ ವ್ಯವಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಆ ಸ್ಥಿತಿಯಿಂದ ಮೇಲೆತ್ತಲು ಅಥವಾ ಪಾರುಮಾಡಲು ಸರಕಾರಗಳು ಕೊಡುವ ಕಾಣಿಕೆಯೇ ಈ ಪಾರುಗಾಣಿಕೆ. ವ್ಯವಸ್ಥೆಯೊಂದರ ಅಭಿವೃದ್ಧಿಗೆ ಸರಕಾರ ಘೋಷಿಸುತ್ತಿದ್ದ ಪ್ರೋತ್ಸಾಹಕರ ನೀತಿಗಳನ್ನು, ಇಂಥ ಉದ್ಯಮಕ್ಕೆ ಸರಕಾರ ಉತ್ತೇಜಕ ಕ್ರಮಗಳನ್ನು ಕೈಗೊಂಡಿದೆ ಎಂದು ಈವರೆವಿಗೂ ಹೇಳಲಾಗುತ್ತಿತ್ತು. ಈ ಎಲ್ಲ ಉತ್ತೇಜಕ ಕ್ರಮಗಳು ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ಲಾಭ ತಂದುಕೊಡುತ್ತಿರಲಿಲ್ಲ. ಬದಲಾಗಿ ಆಯಾ ಕ್ಷೇತ್ರದ ಎಲ್ಲ ರೀತಿಯ ಬೃಹತ್ ಮತ್ತು ಸಣ್ಣ ಉದ್ಯಮಗಳಿಗೆ ನೆರವಾಗುತ್ತಿದ್ದವು.
ಅಮೆರಿಕ, ಬ್ರಿಟನ್, ಚೀನಾ, ರಷ್ಯಾ,ಫ್ರಾನ್ಸ್ ಮತ್ತು ಜಪಾನ್ ಮುಂತಾದ ಮುಂದುವರಿದ ರಾಷ್ಟ್ರಗಳು ಕಂಪನಿ ಹಾಗೂ ನಿರ್ದಿಷ್ಟ ಉದ್ಯಮದ ಕಂಪನಿಗಳ ಸಮೂಹಕ್ಕೆ ಈ ಪಾರುಗಾಣಿಕೆ ಪ್ಯಾಕೇಜ್ ನೀಡುವ ಪರಿಪಾಠವನ್ನು ಬಹಳ ಹಿಂದಿನಿಂದಲೇ ಇಟ್ಟುಕೊಂಡಿವೆ. ಪ್ರಸ್ತುತ ಆರ್ಥಿಕ ಕುಸಿತದಲ್ಲಿ ಅಮೆರಿಕ ಮಾಡುತ್ತಿರುವುದೂ ಇದನ್ನೆ. ಸತ್ಯಂಗೆ ಪಾರುಗಾಣಿಕೆ ಇಲ್ಲ ಎಂದು ಸರಕಾರ ಎರಡೆರಡು ಬಾರಿ ಹೇಳಿದೆಯಾದರೂ ಅದನ್ನು ಪೂರ್ಣ ನಂಬುವಂತಿಲ್ಲ. ಸತ್ಯಂ ಹಗರಣ ಕೇವಲ ಸಂಕೇತ ಮಾತ್ರ. ಮುಂದೆ ಇಂತಹ ಪರಿಸ್ಥಿತಿಗಳು ಬೇಕಾದಷ್ಟು ಬರಬಹುದು.
ಭಾರತಕ್ಕಿಂತ ಹತ್ತಾರು ಪಟ್ಟು ಹೆಚ್ಚು ಸದೃಢ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕದಂಥ ದೇಶದಲ್ಲೇ ಈಗ ಪಾರುಗಾಣಿಕೆ (ಬೇಲ್ಔಟ್) ಬಗ್ಗೆ ಅಪಸ್ವರಗಳು ಏಳುತ್ತಿವೆ. ಬಂಡವಾಳಶಾಹಿಗಳ ವಕ್ತಾರರು ಎಂಬ ಆಪಾದನೆ ಹೊತ್ತುಕೊಂಡಿರುವ ಅಮೆರಿಕದ ಹೆಸರಾಂತ ಆರ್ಥಶಾಸ್ತ್ರಜ್ಞ ಪಾಲ್ಕ್ರುಗ್ಮನ್ ಮತ್ತು ಪತ್ರಕರ್ತ ಥಾಮಸ್ ಫ್ರೀಡ್ಮನ್ ಅಂಥವರೂ ಕೂಡಾ ಈಗ ಪಾರುಗಾಣಿಕೆ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಾರುಗಾಣಿಕೆ ವ್ಯಾಖ್ಯಾನಕ್ಕೆ ಬೇರೆಯದೇ ಅರ್ಥವ್ಯಾಪ್ತಿಯ ಅನಿವಾರ್ಯತೆ ಇದೆ ಎನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭಾರತದಂಥ ಮುಂದುವರಿಯುತ್ತಿರುವ ದೇಶ ಪಾರುಗಾಣಿಕೆ ಬಗ್ಗೆ ಯೋಚಿಸುವುದು ಎಷ್ಟು ಸರಿ?
ಬಹುಸಂಖ್ಯಾತರ ಸುಖಗಳನ್ನು ಕಿತ್ತುಕೊಂಡು ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ, ತಣಿಸಲೆಂದೇ ಇರುವ ಕಂಪನಿಗಳ ಸಿಇಒಗಳಂತಿರುವ ರಾಜಕಾರಣಿ/ಅಕಾರಿ/ಅಕಾರೇತರ ವರ್ಗ ಆಧುನಿಕ ಭಾರತದಲ್ಲಿ ಅನೇಕ ಮಂದಿ ಸಿಗುತ್ತಾರೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಸುತ್ತಿದ್ದ ಕೆಲವೇ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದ್ದ ಸತ್ಯಂನ ಮೀಸೆ ಮಣ್ಣಾಗುವುದರೊಂದಿಗೆ ಭಾರತದಲ್ಲಿ ಬಹು ಚರ್ಚೆಯಾಗುತ್ತಿರುವುದು ಈ ಪಾರುಗಾಣಿಕೆ ಕುರಿತದ್ದೇ. ಸತ್ಯಂನಂಥ ಕಂಪನಿಗಳು ಮಾಡಿಕೊಂಡ ಅವಾಂತರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಘಾಸಿ ಈ ಪಾರುಗಾಣಿಕೆಯಿಂದ ಖಂಡಿತಾ ಸರಿಹೋಗುವುದಿಲ್ಲ. ಇದು ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಿಕ್ಕೀತೇ? ಎಂಬಂತೆ.
ಐಟಿ ಜಗತ್ತು ಸಮಗ್ರ ಜನಜೀವನವನ್ನು ಅಸ್ತವ್ಯಸ್ತ ಮಾಡುವಷ್ಟು ಪ್ರಭಾವವನ್ನು ಭಾರತದಲ್ಲಿ ಇನ್ನೂ ಹರಡಿಲ್ಲ. ಹಾಗಾಗಿ ಅದು ಎಲ್ಲರ ಅಳಿವು -ಉಳಿವೇನಲ್ಲ. ಇಲ್ಲಿನ ಜನರ ನೀರು, ಭೂಮಿ ಕಬಳಿಸಿ ಅವರನ್ನು ಅತಂತ್ರರನ್ನಾಗಿಸಿ ವಿದೇಶಿ ವಿನಿಮಯದ ಕಾರಣಕ್ಕೆ ರೂಪಾಯಿಗೆ ಒಂದಷ್ಟು ಬೆಲೆ ತಂದುಕೊಟ್ಟಿರುವುದೇ ದೇಶಕ್ಕೆ ಆಗಿರುವ ಲಾಭ. ಇದೇ ಮಂದಿ ರೂಪಾಯಿ ದುರ್ಬಲಗೊಂಡರೆ ಕುಣಿದು ಕುಪ್ಪಳಿಸುತ್ತಾರೆ. ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿಗೆ ಸ್ವಲ್ಪ ಕಿಮ್ಮತ್ತು ಬಂದರೂ ತಮ್ಮ ಲಾಭಾಂಶಕ್ಕೆ ಹೊಡೆತ ಅಂತ ನೆಲಮುಗಿಲು ಒಂದಾಗುವಂತೆ ಬಡಬಡಿಸುತ್ತಾರೆ. ಹತ್ತಾರು ವರ್ಷಗಳಿಂದ ಇಲ್ಲಿ ಒಪ್ಪೊತ್ತಿಗೆ ಅನ್ನವಿಲ್ಲದೆ, ಕೆಲಸಕ್ಕೆ ಸರಿಯಾದ ಕೂಲಿಯಿಲ್ಲದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಈ ದರಿದ್ರ ಸರಕಾರಗಳಿಗೆ ಅನ್ನದಾತನನ್ನು ಪಾರು ಮಾಡುವ ಯಾವ ಪಾರುಗಾಣಿಕೆ ಉಪಾಯಗಳೂ ಹೊಳೆದಿಲ್ಲ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾವಿರಾರು ರೈತರ ಕಲ್ಯಾಣಕ್ಕೆ ಒಂದು ಸಮಗ್ರ ಪ್ಯಾಕೇಜ್ ನೀಡಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಸೂರಿಲ್ಲದೆ, ನೀರಿಲ್ಲದೆ, ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದು ಬದುಕುತ್ತಿರುವವರ ಮಕ್ಕಳು ಶಾಲೆಗೆ ಹೋಗಲು ಮೈಲುಗಟ್ಟಲೆ ಕೆಟ್ಟ ರಸ್ತೆಯಲ್ಲಿ ನಡೆಯಬೇಕು. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಇದೇ ರಸ್ತೆಯಲ್ಲಿ ಹೊತ್ತೊಯ್ಯಬೇಕು. ಆದರೆ ತಮ್ಮ ಹವಾನಿಯಂತ್ರಿತ ಕಾರುಗಳು ಓಡಾಡಲು ರಸ್ತೆಯ ಒಂದು ತಿರುವಿನಲ್ಲಿ ಒಂದು ಬಿರುಕು ಬಿಟ್ಟಿದ್ದರೂ ಸರಕಾರ ಸರಿಯಾದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ಕೂಗಾಡಿ ಬೇರೆ ರಾಜ್ಯ/ದೇಶಕ್ಕೆ ಹೋಗುತ್ತೇವೆಂದು ಬೆದರಿಕೆಯೊಡ್ಡುತ್ತಲೇ ವ್ಯವಹರಿಸುವ ಐಟಿ-ಬಿಟಿ ಮಂದಿಯನ್ನು ಪಾರು ಮಾಡುವುದು ಹೇಗೆಂಬ ಚರ್ಚೆಗಳು ಸತ್ಯಂ ಪತನದ ಕಾರಣದಿಂದ ಮುಗಿಲು ಮುಟ್ಟಿವೆ. ಸತ್ಯಂ ಹುಳುಕು ಹೊರಬಿದ್ದು ತಿಂಗಳೂ ಕಳೆದಿಲ್ಲ ಆಗಲೇ ಅವರನ್ನು ಮೇಲೆತ್ತಲು ಜನರ ತೆರಿಗೆ ಹಣವನ್ನು ಸುರಿಯಬೇಕೆಂದು ಕೆಲ ರಾಜಕಾರಣಿ-ಅಕಾರಿ ದಲ್ಲಾಳಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಪೂರ್ಣಪ್ರಮಾಣದ ದಿನಗೂಲಿಯೂ ಸಿಗದೆ ದೇಶದ ಶೇಕಡಾ ೭೦ರಷ್ಟು ಮಂದಿ ಒದ್ದಾಡುತ್ತಿರುವಾಗ, ಲಕ್ಷಗಳಲ್ಲಿ ಸಂಬಳ ಎಣಿಸಿಕೊಂಡು ಐಷಾರಾಮಿ ಜೀವನ ನಡೆಸಿದ ಕೆಲವೇ ಸಾವಿರ ಮಂದಿ ಬಗ್ಗೆ ಇಷ್ಟೊಂದು ತೀವ್ರವಾಗಿ ಸ್ಪಂದಿಸುತ್ತಿರುವವರಿಗೆ ದೇಶದ ಬೆನ್ನೆಲುಬಾದ ಲಕ್ಷ, ಲಕ್ಷ ಜನರ ಗೋಳು ಮಾತ್ರ ‘ದಿನಾ ಸಾಯುವವರಿಗೆ ಅಳುವವರ್ಯಾರು?’ ಎನ್ನುವಂತಹದ್ದು. ಅಷ್ಟಾಗಿಯೂ, ಅವನು ಕೊಟ್ಟ ಹಣದಿಂದಲೇ ಈ ಐಷಾರಾಮಿಗಳನ್ನು ಉಳಿಸಬೇಕಿರುವ ವಿಪರ್ಯಾಸ ನೋಡಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಯಾವಾಗಲೂ ಮೇಲು’ ಹೇಗೆಂದು ಈಗ ಅನೇಕರಿಗೆ ಗೊತ್ತಾಗುತ್ತಿರಬಹುದು. ಯಾವತ್ತೂ ಕೊಡುತ್ತಿದ್ದ ರೈತ ಕೇಳಲಾರಂಭಿಸಿ ಎಷ್ಟೋ ದಿನಗಳಾಗಿದ್ದರೂ ಅವನತ್ತ ಬೆನ್ನು ತಿರುಗಿಸಿರುವ ಮಂದಿ ಇವತ್ತು ಜಗತ್ತೇ ಮುಳುಗಿ ಹೋಗಿದೆ ಎಂಬಂತೆ ಹುಯಿಲೆಬ್ಬಿಸುತ್ತಿದ್ದಾರೆ. ಸತ್ಯಂಗೆ ಎರಡು ಸಾವಿರ ಕೋಟಿ ರೂಗಳ ಪಾರುಗಾಣಿಕೆ ನೀಡಬೇಕೆಂಬ ಚರ್ಚೆ ಕಳೆದ ಕೆಲ ವಾರಗಳಿಂದ ನಡೆಯುತ್ತಲೇ ಇದೆ. ಸತ್ಯಂನ ಕುರಿತ ಖ್ಯಾತಿ/ಕುಖ್ಯಾತಿಗೆ ಹೊಣೆ ಯಾರು? ಅದರ ನೆರವಿಗೆ ಸರಕಾರ ಬರಬೇಕೆ? ಬೇಡವೇ ಎಂಬ ಬಗ್ಗೆ ಸಹಜವಾಗಿಯೇ ಆಂಧ್ರದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರ ನಡುವೆ ಜಟಾಪಟಿ ಜಗಜ್ಜಾಹೀರಾಗಿದೆ. ಇದೇ ವಿಷಯವಾಗಿ ಕೇಂದ್ರದ ಇಬ್ಬರು ಪ್ರಭಾವಿ ಸಚಿವರಾಗಿರುವ ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಪಾರುಗಾಣಿಕೆ ಪ್ರಸ್ತಾವವನ್ನು ವಿರೋಸಿದ್ದಾರೆಂಬ ಸುದ್ದಿ ಬಂದಿದೆ. ಅವರ ಈ ವಿರೋಧದ ಹಿಂದೆ ಮೇಲೆ ಚರ್ಚಿಸಿರುವ ಅನೇಕ ಸೂಕ್ಷ್ಮಗಳೇ ಇರಬೇಕು. ಇಂಥ ವಿಷಯಗಳ ಬಗ್ಗೆ ಎಂದಿನ ತಮ್ಮ ನಿಧಾನ ತಂತ್ರ ಅನುಸರಿಸುತ್ತಿರುವ ಎಡಪಂಥೀಯರಿಗಂತೂ ಈ ವಿಷಯ ಅಗ್ನಿಪರೀಕ್ಷೆಯೇ ಸರಿ. ಜನರ ನೀರು, ಭೂಮಿಯನ್ನು ಕಬಳಿಸಿ ಸರಕಾರದ ಮೇಲೆ ಪ್ರಭಾವ ಬೀರಿ ಎಲ್ಲ ಸಂಪನ್ಮೂಲಗಳನ್ನು ತಮ್ಮೆಡೆಗೆ ಬಹಳ ಘನತೆಯಿಂದಲೇ ತಿರುಗಿಸಿಕೊಳ್ಳುವ ಚಾಣಾಕ್ಷ ಐಟಿ-ಬಿಟಿ ಉದ್ಯಮಿಗಳು, ತಾವು ಪಡೆದಿರುವುದಕ್ಕೆ ಪ್ರತಿಯಾಗಿ ಕೊಟ್ಟಿರುವುದು ಏನೂ ಇಲ್ಲ. ಜನಸಾಮಾನ್ಯರು ಪಟ್ಟಣದಲ್ಲಿ ಜೀವಿಸಲು ಸಾಧ್ಯವಾಗದಷ್ಟು ದುಬಾರಿಗೊಳಿಸಿದ್ದು ಇವರು ಕೊಟ್ಟಿರುವ ಬೃಹತ್ ಕೊಡುಗೆ. ನೂರು ಜನರ ಅನ್ನ, ಭೂಮಿ ಕಿತ್ತುಕೊಂಡು ೧೦ ಜನಕ್ಕೆ ಕೆಲಸ ಕೊಟ್ಟು ಅತಿಯಾದ ಸಂಬಳ ಕೊಟ್ಟರೆ ದೇಶ ಉದ್ಧಾರವಾಗುತ್ತದೆ ಎಂಬ ಭ್ರಮೆ ಹುಟ್ಟಿಸಿ ಸಮಾಜದಲ್ಲಿ ಬೃಹತ್ ಕಂದಕಕ್ಕೆ ಕಾರಣವಾಗಿರುವ ಅನೇಕರು, ಎಲ್ಲ ಹೋರಾಟಗಳನ್ನು ಹತ್ತಿಕ್ಕಿ ತಮಗೆ ಭೂಮಿ, ನೀರು ಕೊಡುವ ಮುಖ್ಯಮಂತ್ರಿಗಳನ್ನು ನಂಬರ್ ಒನ್ ಮುಖ್ಯಮಂತ್ರಿ ಎಂದೋ ಇಲ್ಲ ಈತ ಪ್ರಧಾನಿ ಆಗಬೇಕು ಎಂತಲೋ ವಂದಿಮಾಗದರಂತೆ ವದರುವ ಇವರಿಗೆ ಅದೇ ಸಾಮಾನ್ಯನ ತೆರಿಗೆ ಹಣವನ್ನೇ ಏಕೆ ಕೊಡಬೇಕು?
ಇವತ್ತಿಗೂ ತಂತ್ರಜ್ಞಾನವೂ ಸೇರಿದಂತೆ ಇತರೆ ಯಾವುದೇ ಉದ್ಯಮವೂ ಭಾರತದ ಎಲ್ಲರನ್ನೂ ಪ್ರತಿನಿಸುವ ಅವರ ಏಳಿಗೆಗಾಗಿ ಇರುವ ಏಕೈಕ ಪಾರಂಪರಿಕ ರಂಗ ಅಥವ ಸಂಕೇತವೇನಲ್ಲ. ಕಂಪನಿಯೊಂದು ಮಾಡಿಕೊಂಡ ಯಡವಟ್ಟಿಗೆ ಬೇರೆಯವರ ಮೂಗನ್ನೇಕೆ ಕೊಯ್ಯಬೇಕು? ಹಾಗೆಂದು ಸಾವಿರಾರು ಉದ್ಯೋಗಿಗಳ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಗ್ಗೆ ಅನುಕಂಪ ಖಂಡಿತಾ ಇರಬೇಕು. ಅದರೆ ಅವರ್ಯಾರೂ ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿಲ್ಲವಲ್ಲ. ಅವರೆಲ್ಲ ವೃತ್ತಿ ಪ್ರತಿಭಾವಂತರು. ಬೇಕಾದಷ್ಟು ಅವಕಾಶಗಳೂ ಇವೆ. ಅಲ್ಲಿವರೆಗೆ ಉಪವಾಸ ಬೀಳುವ ಸ್ಥಿತಿಯಂತೂ ಅವರ್ಯಾರಿಗೂ ಇಲ್ಲ. ಅಣೆಕಟ್ಟೆ ಕಟ್ಟಲು ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ, ಒಂದಿಷ್ಟು ಪರಿಹಾರ ಕೊಟ್ಟು ಪುನರ್ವಸತಿ ಎಂಬ ಹಂದಿಗೂಡುಗಳಂಥ ಜಾಗಕ್ಕೆ ನೂಕುವ ಈ ಅಕಾರಿ-ರಾಜಕಾರಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲವೆ? ತಲೆತಲಾಂತರದಿಂದ ಬಂದ ಎಲ್ಲವನ್ನೂ ಕಳೆದುಕೊಂಡು ದಿನದಿನಕ್ಕೂ ಕಿಮ್ಮತ್ತು ಕಡಿಮೆಯಾಗುವ ದುಡ್ಡು ತೆಗೆದುಕೊಂಡು ಈಗಾಗಲೇ ಊರು ತೊರೆದವರ ಸಂಕಷ್ಟಗಳಿಗೆ ಈ ಮಂದಿ ಸ್ಪಂದಿಸಿದ್ದಾರೆಯೇ?. ಇಷ್ಟೆಲ್ಲದರ ಹೊರತಾಗಿಯೂ ತಾನು ಲಾಭ ಗಳಿಸುವಾಗ ಮೂರು ತಿಂಗಳಿಗೊಮ್ಮೆ, ಅವು ದೇಶದ ಜಿಡಿಪಿ ಅಂಕಿ -ಅಂಶಗಳೇನೋ ಎಂಬಂತೆ ವರದಿಗಳನ್ನು ಮಾಧ್ಯಮಕ್ಕೆ ತಲುಪಿಸುವ ಐಟಿ-ಬಿಟಿ ಮಂದಿ, ಅದರ ಶೇಕಡಾ ಒಂದರಷ್ಟನ್ನಾದರೂ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದಾರೆಯೇ? ಹತ್ತಾರು ವರ್ಷಗಳ ತೆರಿಗೆ ರಿಯಾಯಿತಿ ಪಡೆದು ಹಣ ಮಾಡುವಾಗ ಯಾರನ್ನೂ ದರಕರಿಸದ ಇವರನ್ನು ಜನರ ಹಣದಿಂದ ಏಕೆ ಉಳಿಸಬೇಕು? ಸತ್ಯಂಗೆ ಪಾರುಗಾಣಿಕೆ ನೀಡುವುದೇ ನಿಜವೇ ಆದರೆ ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆಯಷ್ಟೇ ಅಲ್ಲದೆ ಜನವಿರೋ ಹಾಗೂ ಜನತಂತ್ರವಿರೋ ಕೂಡಾ. ಪ್ರಪಂಚದಲ್ಲಿ ಆಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದ ಈಗ ಐಟಿ ಸೇರಿದಂತೆ ಎಲ್ಲ ಉದ್ಯಮಗಳೂ ಸಂಕಷ್ಟದಲ್ಲಿವೆ. ಹಾಗಾಗಿ ಯಾವುದೋ ಒಂದು ವಲಯದ ಒಂದು ಕಂಪನಿಗೆ ಪಾರುಗಾಣಿಕೆ ನೀಡುವ ಬದಲು ಇಡೀ ಉದ್ಯಮ ವಲಯಕ್ಕೆ ಅನುಕೂಲವಾಗುವಂಥ ಸಮಗ್ರ ಸುಧಾರಣಾ ಕ್ರಮ ಕೈಗೊಂಡರೆ ಒಳ್ಳೆಯ ಫಲ ದೊರೆಯಬಹುದು.
ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ರಾಜಕೀಯ ವ್ಯವಸ್ಥೆ, ಮುಂದುವರಿದ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಗಿಂತ ಪೂರ್ಣ ಭಿನ್ನ. ಅದರಲ್ಲೂ ಭಾರತದಂಥ ದೇಶದಲ್ಲಿ ಬಹುಸಂಸ್ಕೃತಿಯ ಬೃಹತ್ ಪ್ರಜಾಪ್ರಭುತ್ವವಿದ್ದರೂ ಜಾತಿ, ಧರ್ಮದ ಆಧಾರದ ಮೇಲೇ ಇನ್ನೂ ಪ್ರಭಾವ ಉಳಿದುಕೊಂಡಿರುವ ಸ್ವಜನಪಕ್ಷಪಾತ, ಭ್ರಷ್ಟ ವ್ಯವಸ್ಥೆ ತುಂಬಿ ತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ತಮಗೆ ಬೇಕಾದವರಿಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಪಾರುಗಾಣಿಕೆ ಹಂಚುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹಾಗಾಗಿಯೇ ಪಾರುಗಾಣಿಕೆ ಭಾರತದ ಮಟ್ಟಿಗೆ ನಿಜವಾಗಿಯೂ ಸೋಂಕು.
೧೮ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಲಂಕೆಗೊಂದು ಲಂಘನ
ಶ್ರೀಲಂಕಾ, ಭಾರತ ಮಾತೆ ಸುರಿಸಿದ ಒಂದು ಕಣ್ಣೀರ ಹನಿ. ಇದು ಯಾರಿಗೆ ಹೊಳೆದ ಅದ್ಭುತವೋ ಗೊತ್ತಿಲ್ಲ. ಶ್ರೀಲಂಕಾದ ಭೂಪಟವನ್ನು ನೋಡಿದರೆ ಹಾಗನಿಸುತ್ತದೆ. ಭಾರತ ಮಾತೆ ಸಂತೋಷಕ್ಕೊ, ದುಃಖಕ್ಕೋ ಸುರಿಸಿದ ಕಣ್ಣೀರಿನಿಂದ ಶ್ರೀಲಂಕಾ ಉದಿಸಿದೆ ಎಂಬ ಒಂದು ಅಂಶವೇ ಲಂಕಾದ ಬಗೆಗೆ ಭಾರತೀಯರಿಗೆ ಎಂಥದೋ ಒಂದು ಸಂಬಂಧ ಏರ್ಪಡಿಸುತ್ತದೆ. ಜಗತ್ತಿಗೆ ಮೊದಲ ಮಹಿಳಾ ಪ್ರಧಾನಿಯನ್ನು ಕೊಟ್ಟ ದೇಶದ ಭೂಪಟಕ್ಕೆ ಈ ಕಲ್ಪನೆ ಕೊಟ್ಟ ಮಹಾತ್ಮನಿಗೆ ಒಂದು ನಮಸ್ಕಾರ.
ಅಂತರಿಕ ಸಮಸ್ಯೆ ಜತೆಗೆ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿರುವ ದೇಶವೊಂದರ ಸ್ಥಿತಿ ಹಣಕಾಸು ಹಿಂಜರಿತದ ಸಮಯದಲ್ಲಿ ಹೇಗಾಗಬಹುದು ಎಂಬುದಕ್ಕೆ ಶ್ರೀಲಂಕಾ ಈಗ ಅತ್ಯುತ್ತಮ ಉದಾಹರಣೆಯಂತಿದೆ. ಹಣಕಾಸು ಹಿಂಜರಿತದ ತೀವ್ರ ಪರಿಣಾಮಗಳು ಲಂಕಾದ ತುಂಬ ಕಾಣುತ್ತವೆ. ಬಣ ಬಣ ಎನ್ನುವ ಹೋಟೆಲ್, ರೆಸಾರ್ಟ್ಗಳು, ಬೀಚ್ಗಳು ಪ್ರವಾಸಿಗರ ಕೊರತೆಯಿಂದ ನಲುಗುತ್ತಿವೆ. ಹಾಗಾಗಿ ಯಾವುದೆ ಹೋಟೆಲ್, ರೆಸಾರ್ಟ್ಗೆ ಹೋದರೂ ಅಲ್ಲಿನ ಊಟೋಪಚಾರ ಅಷ್ಟಕ್ಕಷ್ಟೆ. ಅಷ್ಟೇಕೆ ನಾವು ಉಳಿದುಕೊಂಡಿದ್ದ ಕೊಲಂಬೊದಲ್ಲಿರುವ ಭಾರತದ ಹೆಸರಾಂತ ಪಂಚತಾರಾ ಹೋಟೆಲ್ನಲ್ಲೂ ಊಟ,ತಿಂಡಿ ಎಲ್ಲವೂ ಸಪ್ಪೆ,ಸಪ್ಪೆ. ಹೆಚ್ಚೇನೂ ಆಯ್ಕೆಗೆ ಅವಕಾಶವಿರದಂಥ ಸರಳ ಊಟ. ಪಂಚತಾರಾ ಹೋಟೆಲ್ ಊಟ ಅಂದರೆ ಇಷ್ಟೇನಾ ಎನ್ನುವಷ್ಟು.
ಸೈನಿಕರ ಗಸ್ತು: ಪ್ರವಾಸಿಗಳ ಕುಸಿತಕ್ಕೆ ಲಂಕೆಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ವ್ಯಾಪಕ ಪರಿಣಾಮ ಬೀರಿದೆ ಎನಿಸುತ್ತದೆ. ಹೆಜ್ಜೆ ಹೆಜ್ಜೆಗೂ ತಪಾಸಣೆ ಅದೂ ಕೂಗಳತೆ ದೂರದಲ್ಲೇ ಎರಡೆರಡು ಬಾರಿ. ಪ್ರತಿ ಬಾರಿಯೂ ವಾಹನದಿಂದ ಕೆಳಗಿಳಿದು ಎಲ್ಲ ವರದಿ ಒಪ್ಪಿಸಿದ ನಂತರವೇ ಮುಂದಕ್ಕೆ ಹೋಗಬೇಕು. ನಾಗರಿಕರ ನಡುವೆಯೇ ಆಧುನಿಕ ಬಂದೂಕುಗಳನ್ನು ಹಿಡಿದ ಯುವ ಸೈನಿಕರು ಎಲ್ಲೆಂದರಲ್ಲಿ ಕಣ್ಣಿಗೆ ಬೀಳುತ್ತಾರೆ. ಈ ಪರಿಯ ಭದ್ರತೆ ಬಗ್ಗೆ ಟಿವಿಗಳಲ್ಲಿ ನೋಡಿ, ಪತ್ರಿಕೆಗಳಿಲ್ಲಿ ಓದಿದ್ದ ನಮಗೆ ಬಿಗಿ ಭದ್ರತೆ ಎಂದರೇನು ಅಂದು ಗೊತ್ತಾದದ್ದು ಲಂಕಾದ ರಾಜಧಾನಿ ಕೊಲಂಬೊದಲ್ಲಿ.
ಲಂಕೆಯ ಸೈನಿಕರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಅಲ್ಲಿ ಸೈನ್ಯಕ್ಕೆ ಸೇರಲು ಕನಿಷ್ಠ ವಯೋಮಿತಿ ೧೫ ವರ್ಷ. ಸೇನೆಗೆ ಸೇರುವುದು ಕಡ್ಡಾಯವಲ್ಲದಿದ್ದರೂ ಕಾಲೇಜಿನಲ್ಲಿ ಕಲಿಯಬೇಕಾದ ವಯಸ್ಸಿನಲ್ಲಿ ಗನ್ ಹಿಡಿದು ದೇಶಸೇವೆ ಮಾಡುತ್ತಿದ್ದ, ಗಂಭಿರ ಹಸನ್ಮುಖಿಗಳಂತೆ ಕಾಣುತ್ತಿದ್ದ ಅವರನ್ನು ನೋಡಿದರೆ ನಾವೆಲ್ಲ ಎಷ್ಟು ಪುಣ್ಯವಂತರು ಅನಿಸುತ್ತಿತ್ತು. ನಾವು ಕಂಡ ಬಹುತೇಕ ಸೈನಿಕರ ವಯಸ್ಸು ೨೫ ವರ್ಷ ದಾಟಿರಲಿಲ್ಲ. ಕೆಲವರಂತೂ ಗಂಟೆಗಟ್ಟಲೆ ಒಂದೇ ಕಡೆ ನಿಲ್ಲಬೇಕಾಗಿದೆ. ಅವರ ಹೆಗಲ ಮೇಲೆ ದೊಡ್ಡ ಬಂದೂಕು. ಅದರ ತೂಕ ಎಷ್ಟೋ? ಹೆದ್ದಾರಿಗಳಲ್ಲಿ ಮರಳು ತುಂಬಿದ ಚೀಲಗಳ ಕೋಟೆ ಕಟ್ಟಿಕೊಂಡು ನಡುವೆ ಗನ್ ಹಿಡಿದು ಸೆಟೆದುಕೊಂಡಿದ್ದರೂ ಸ್ಥಿತಪ್ರಜ್ಞರಂತಿದ್ದ ಆ ಯುವ ಸಯನಿಕರು ಹುಟ್ಟುಸಿದ ಭಾವನೆಗಳು ನೂರಾರು. ಬಂದೂಕು ಹಿಡಿದು ಶಿಫ್ಟ್ಗಳಲ್ಲಿ ಹಗಲಿರುಳೆನ್ನದೆ ಜನರ ರಕ್ಷಣೆಗೆ ನಿಲ್ಲುವ ಜಗತ್ತಿನ ಎಲ್ಲ ಸೈನಿಕರಿಗೂ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದೆಂಬ ಭಾವ ಮೂಡಿತು.
ಬಿಗಿ ಭದ್ರತೆ: ಪೋರ್ಚುಗೀಸರು, ಅರಬರು ಮತ್ತು ಇಂಗ್ಲಿಷರ ಆಡಳಿತಕ್ಕೆ ಒಳಗಾಗಿದ್ದ ಶ್ರೀಲಂಕಾ ಸ್ವತಂತ್ರಗೊಂಡಿದ್ದು ೧೯೪೮ನೇ ಇಸವಿ ಫೆಬ್ರವರಿ ೪ರಂದು. ನಮ್ಮ ತಂಡ ಕೊಲಂಬೊದಲ್ಲಿದ್ದ ದಿನ (ಜನವರಿ.೨೦) ಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ೧೪ ದಿನ ಉಳಿದಿತ್ತು. ಅದಕ್ಕಾಗಿ ತಾಜ್ ಸಮುದ್ರ ಹೋಟೆಲ್ನ ಪಕ್ಕದಲ್ಲಿ ಬೀಚ್ಗೆ ಎದುರಾಗಿ ಭರ್ಜರಿ ಸಭಾಂಗಣದ ನಿರ್ಮಾಣವೂ ನಡೆಯುತ್ತಿತ್ತು. ಇಪ್ಪತ್ತರ ಬೆಳಗ್ಗೆ ನಾವು ತಾಜ್ ಹೋಟೆಲ್ನ ಮುಂದಿರುವ ಕಣ್ಣುಕುಕ್ಕುವಂತಿದ್ದ ಸುಮಾರು ೨ ಕಿಲೋಮೀಟರ್ ಉದ್ದದ ಕಡಲ ದಂಡೆಯ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಗಮನಿಸುತ್ತಿದ್ದ ಸೈನಿಕರು ನಮ್ಮೆಡೆಯೇ ದೃಷ್ಟಿ ನೆಟ್ಟಿದ್ದರು. ಕೆಲವರು ನಾಗರಿಕರ ವೇಷದಲ್ಲಿದ್ದರು. ಸೈನಿಕರ ಫೋಟೊ ತೆಗೆಯುವುದು ಬೇಡ ಎಂಬ ಸೂಚನೆ ಕೊಡಲಾಗಿತ್ತು. ಬಿಗಿ ಭದ್ರತೆ ಕಾರಣದಿಂದ ನಮ್ಮ ಬೆಂಗಳೂರಿನ ಸಣ್ಣ ಪಾರ್ಕೊಂದರಲ್ಲಿ ವಾಕ್ ಮಾಡುವಷ್ಟು ಜನರೂ ಅಲ್ಲಿರಲಿಲ್ಲ. ವಾಕ್ ಮುಗಿಸಿ ಮರಳುವಾಗ ನಾವು ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಪ್ರತಿಮೆಯೊಂದರ ಫೋಟೊ ತೆಗೆದುಕೊಂಡು ಅದೇ ಬದಿಯಿಂದ ಹೊಟೇಲ್ ಕಡೆ ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಬರುತ್ತಿದ್ದೆವು. ಇದ್ದಕ್ಕಿದ್ದಂತೆ ನಾಲ್ಕೈದು ಪೊಲೀಸರು ಮತ್ತು ಸೈನಿಕರಿದ್ದ ತಂಡ ನಮ್ಮನ್ನು ಸುತ್ತುವರಿಯಿತು. ಪ್ರಶ್ನೆಗಳ ಮಳೆ ಸುರಿಸಿತು. ನಾವು ಪಂಚತಾರಾ ಹೋಟೆಲ್ನ ಅತಿಥಿಗಳು, ಮಾಧ್ಯಮದವರು ಎಂದೆವು. ಪಾಕಿಸ್ತಾನದವರಾ ಎಂದ ಒಬ್ಬ. ಭಾರತೀಯರು ಎಂದೆವು. ಇನ್ನೊಬ್ಬ ತಮಿಳಾ ಎಂದ. ನಾವು ಬೆಂಗಳೂರಿನವರು ಎಂದೆವು. ನಗುಮೊಗದಿಂದ ನಮ್ಮನ್ನು ರಸ್ತೆಯ ಇನ್ನೊಂದು ಬದಿಯಿಂದ ಹೋಟೆಲ್ಗೆ ಹೋಗುವಂತೆ ಸೂಚಿಸಿ ದಾರಿ ಬಿಡಲಾಯಿತು. ಆ ಕಡೆ ಅಧ್ಯಕ್ಷರದೂ, ಪ್ರಧಾನಿಯದೋ ನಿವಾಸ ಇದೆ ಎಂದು ಯಾರೋ ಗೊಣಗಿದರು. ಅಂದು ರಾತ್ರಿ ಊಟವಾದ ನಂತರ ಒಂದು ರೌಂಡ್ ಬೀಚ್ನಲ್ಲಿ ಸುತ್ತೋಣ ಎನಿಸಿ ಹೋಟೆಲ್ ಕಾಂಪೌಂಡ್ನ ಬಳಿ ಬಂದೆವು. ಹೋಟೆಲ್ನ ಎರಡೂ ಬದಿ ನಿಂತು ಕಾವಲು ಕಾಯುತ್ತಿದ್ದ ಸೈನಿಕರು ನಮ್ಮನ್ನು ಹೊರಬಿಡಲು ಸುತಾರಾಂ ಒಪ್ಪಲಿಲ್ಲ. ಅದಕ್ಕಾಗಿ ದೇಶದ ಉತ್ತರ ಭಾಗವಾದ ಜಾಫ್ನಾದಲ್ಲಿ ಎಲ್ಟಿಟಿಇ ಗೆರಿಲ್ಲಾಗಳೊಂದಿಗೆ ನಡೆಯುತ್ತಿದ್ದ ನಿರ್ಣಾಯಕ ಸಮರದ ಪರಿಣಾಮ ಭದ್ರತೆ ತುಸು ಅತಿ ಎನಿಸುವಷ್ಟಿತ್ತು.
ಸಹಜ ಸುಂದರಿ ಕೊಲಂಬೊ: ಬಹುಪಾಲು ವೃತ್ತಗಳಲ್ಲಿ ಬುದ್ಧನ ಮುಗುಳ್ನಗೆಯ ಮೂರ್ತಿ, ಯಾವುದೋ ಒಂದು ವೃತ್ತದಲ್ಲಿ ಗಣಪತಿ, ಮತ್ತೊಂದು ಸರ್ಕಲ್ನಲ್ಲಿ ವೀಣಾಪಾಣಿ ಸ್ನಿಗ್ಧ ಸೌಂದರ್ಯದ ಸರಸ್ವತಿ ವಿಗ್ರಹ. ಮುಗಿಲನ್ನು ಚುಂಬಿಸುವಂತಿದ್ದ ಎತ್ತರದ ಗೋಪುರ ಹೊಂದಿದ್ದ ನಮ್ಮ ಶ್ರೀರಂಗಪಟ್ಟಣ, ಹಂಪಿ ದೇವಸ್ಥಾನಗಳನ್ನು ನೆನಪಿಸುತ್ತಿದ್ದ ಗೋಪುರಗಳ ದೇವಸ್ಥಾನಗಳು. ಅಷ್ಟೇನೂ ಜನಸಂದಣಿಯಿಲ್ಲದ ಕಿರಿದಾದ ರಸ್ತೆಗಳ ಕಾರಣಕ್ಕೆ ಟ್ರಾಫಿಕ್ಕು. ಮಂಗಳೂರಿನಂಥ ಹವೆ. ಹೆಜ್ಜೆ ಹೆಜ್ಜೆಗೂ ಕಾಣುವ ಟರ್ಫ್ ಕ್ಲಬ್ಗಳ ಅಕೌಂಟೆಂಟ್ ಕಚೇರಿಗಳು, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಪೀಪಲ್ಸ್ ಬ್ಯಾಂಕ್ನ ಶಾಖಾ ಕಚೇರಿಗಳು. ಪೀಪಲ್ಸ್ ಬ್ಯಾಂಕ್ ಶ್ರೀಲಂಕಾದ ಮುಖ್ಯ ಸಂಕೇತಗಳಲ್ಲಿ ಒಂದು. ಕೊಲಂಬೊದಲ್ಲಿ ಶಾಪಿಂಗ್ ಎಂದರೆ ತಟ್ಟನೆ ಎಲ್ಲರೂ ಹೇಳುವ ಹೆಸರು ಹೌಸ್ ಆಫ್ ಫ್ಯಾಷನ್. ಬೆಂಗಳೂರಿನ ಒಂದು ಸಣ್ಣ ಮಾಲ್ನಂತಿರುವ ಹೌಸ್ ಆಫ್ ಫ್ಯಾಷನ್ ತುಂಬ ಪ್ರಸಿದ್ಧ. ಐದು ಅಂತಸ್ತಿನ ಈ ಪುಟ್ಟ ಕಟ್ಟಡದಲ್ಲಿ ಕಿರಾಣಿ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ಅದರಲ್ಲೂ ಬಟ್ಟೆಗಳು ಹೆಚ್ಚು ಸಿಗುತ್ತವೆ. ಹೆಂಗಸರು, ಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೂ ಪ್ರತ್ಯೇಕ ವಿಭಾಗದ ಮಳಿಗೆಗಳಿವೆ. ಇದು ಕೊಲಂಬೊದ ವೈಶಿಷ್ಟ್ಯ.
ಬೀಚ್ಗಳ ತವರು ಬೆಂಟೋಟಾ: ಲಂಕಾ ಪ್ರಕೃತಿ ಸೌಂದರ್ಯದ ಖನಿ. ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಈ ಪುಟ್ಟ ದ್ವೀಪ ಒಂಬತ್ತು ಪ್ರಾಂತ್ಯಗಳುಳ್ಳ ೨೫ ಜಿಲ್ಲೆಗಳನ್ನು ಹೊಂದಿದೆ. ಕರ್ನಾಟಕದ ಮೂರನೇ ಒಂದು ಭಾಗದಷ್ಟಿರುವ ಲಂಕಾದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸಿಗಿರಿಯಾ, ಕ್ಯಾಂಡಿ, ಅನುರಾಧಾಪುರ, ಪೋಲನ್ನರುವಾ, ದಂಬುಲ್ಲಾ, ಕಟರಗಾಮಾ, ಶ್ರೀಪಾದ ಎಂಬ ಏಳು ಸ್ಥಳಗಳಿವೆ. ನಮ್ಮ ಪ್ರವಾಸ ಕಾಲದಲ್ಲಿ ಯಾವುದೇ ವಿಶ್ವಪರಂಪರೆಯ ತಾಣಕ್ಕೆ ಭೇಟಿ ನೀಡಲಿಲ್ಲವಾದರೂ ಬೆಂಟೋಟಾ ಎಂಬ ಸುಂದರ ದ್ವೀಪಗಳ ಗುಚ್ಚದಲ್ಲಿ ವಿಹರಿಸಿದೆವು. ಬೆಂಟೋಟಾ ಕೊಲಂಬೊ ಮತ್ತು ದಕ್ಷಿಣಕ್ಕಿರುವ ಗಾಲೇ ಪಟ್ಟಣಗಳನ್ನು ಸೇರಿಸುವ ಸಮುದ್ರದ ದಂಡೆಯಲ್ಲೇ ಹಾದು ಹೋಗುವ ಹೆದ್ದಾರಿಯಲ್ಲಿದೆ. ಸುಮಾರು ೬೫ ಕಿಲೋಮೀಟರ್ನ ಈ ಅಂತರದಲ್ಲಿ ಹೆಚ್ಚು ಕಡಿಮೆ ಇಕ್ಕೆಲಗಳಲ್ಲಿ ಮನೆಗಳ ನಡುವೆಯೇ ರಸ್ತೆ ಹಾದುಹೋಗುತ್ತದೆ. ಹಾಗಾಗಿ ಸಮುದ್ರದ ದರ್ಶನವಾಗುವುದು ಅಲ್ಲಲ್ಲಿ ಮಾತ್ರ. ಎಕರೆಗಳ ಲೆಕ್ಕದಲ್ಲಿರುವ ನೂರಾರು ದ್ವೀಪಗಳನ್ನು ಸುತ್ತುವರಿದಿರುವ ಹಿನ್ನೀರಿನಲ್ಲಿ ವಿದ್ಯುಚ್ಚಾಲಿತ ದೋಣಿಗಳಲ್ಲಿ ಸಂಚರಿಸುವುದೇ ರೋಚಕ ಅನುಭವ. ಕಡಲ ಹಿನ್ನೀರಿನಲ್ಲಿ ಕಣ್ಣಿಗೆ ಕಾಣುವ ಮೊಸಳೆಗಳ ಹಿಂಡು, ದಡಕ್ಕೆ ಹೊಂದಿಕೊಂಡಿರುವ ತುಂಬಾ ವ್ಯವಸ್ಥಿತವಾಗಿ ಒಪ್ಪವಾಗಿರುವ ರೆಸಾರ್ಟ್ಗಳು, ಹೋಟೆಲ್ಗಳು, ಒಂದೊಂದೇ ಸಂಸಾರಗಳಿರುವ ಕೆಲ ದ್ವೀಪಗಳಿವೆ. ಅಲ್ಲಿರುವ ಹೇರಳ ಮಸಾಲೆಯ ಚೆಕ್ಕೆ ಮರಗಳಿಂದ ಚೆಕ್ಕೆ, ಎಣ್ಣೆ ಬೇರ್ಪಡಿಸಿ ಮಾರುವ ಅಂಥ ಒಂದು ಮನೆಗೆ ನಾವು ಭೇಟಿ ನೀಡಿದ್ದೆವು.
ವ್ಯತ್ಯಾಸವಿಲ್ಲ: ಕೃಷಿಯಂತೆ ಮೀನುಗಾರಿಕೆಯನ್ನು ನಂಬಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಲಂಕೆಯಲ್ಲಿದ್ದಾರೆ. ಪ್ರವಾಸೋದ್ಯಮ ಮತ್ತು ರಫ್ತು ಕುಸಿದರೆ ನೇರ ಪರಿಣಾಮ, ಹೋಟೆಲ್, ಮೀನುಗಾರಿಕೆ ಮೇಲಾಗುತ್ತದೆ. ಅದನ್ನೇ ನಾವು ಲಂಕೆಯಲ್ಲಿ ಹೆಚ್ಚು ಕಂಡೆವು. ಚಹಾ ಲಂಕೆಯಲ್ಲಿ ಬಹು ಸ್ವಾದಗಳಲ್ಲಿ ಸಿಗುತ್ತದೆ. ಟೀ ಪ್ರಿಯರಿಗಂತೂ ಅದು ಆಡಂಬೋಲವೇ ಸರಿ. ಗುಣಮಟ್ಟ ಮತ್ತು ಸ್ವಾದಗಳನ್ನು ಆಧರಿಸಿ ಹತ್ತಾರು ಬಗೆಯ ಸಂಸ್ಕರಿಸಿ ಮಾಡಿದ ಚಹಾ ಎಲೆಗಳ ಡಬ್ಬಗಳ ಪ್ಯಾಕ್ ಸಿಗುತ್ತದೆ. ಸ್ಥಳೀಯ ಪರಂಪರೆ ಸಾರುವ ಮರದ ಕೆತ್ತನೆಗಳು ಹೇರಳವಾಗಿ ಸಿಗುತ್ತವೆ. ಆನೆ, ಬೌದ್ಧ ಹಾಗೂ ಹಿಂದೂ ದೇವರುಗಳ ಸುಂದರ ಮುಖವಾಡಗಳು ಸಿಗುತ್ತವೆ. ಭಾರತದ ಒಂದು ರೂಪಾಯಿಗೆ ಸಧ್ಯಕ್ಕೆ ಶ್ರೀಲಂಕಾದ ಎರಡು ರೂಪಾಯಿ ಇಪ್ಪತ್ತು ಪೈಸೆ ಸಿಗುತ್ತದೆ. ಆ ಲೆಕ್ಕದಲ್ಲಿ ಬೆಲೆಗಳಲ್ಲಿ ಭಾರತ-ಲಂಕಾಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಸಮದ್ರ ದಂಡೆ ಭರ್ತಿ ತೆಂಗಿನಿಂದ ತುಂಬಿದೆ. ಇದರ ಹೊರತು ಟೀ ತೋಟಗಳು, ಮಳೆಕಾಡುಗಳು, ಅಮೂಲ್ಯ ಮರಗಳು ಮತ್ತು ಕಾಡುಪ್ರಾಣಿಗಳಿಂದ ತುಂಬಿರುವ ಶ್ರೀಲಂಕಾ ನಮ್ಮ ಮಲೆನಾಡಿನಂತೆ ಸ್ಪಚ್ಚಂದ ಹಸಿರಿನಿಂದ ಕಂಗೊಳಿಸುತ್ತದೆ. ದೇಶದ ಶೇಕಡ ೨೫ರಷ್ಟು ಭಾಗ ಕಾಡುಪ್ರಾಣಿಗಳದೇ ಸಾಮ್ರಾಜ್ಯ ಭಾರತ ಹಾಗೂ ಶ್ರೀಲಂಕಾಗಳ ನಡುವೆ ರಾಮಾಯಣ ಸೇರಿ ಅನೇಕ ಪೌರಾಣಿಕ ಮತ್ತು ಭೌಗೋಳಿಕ ಸಂಬಂಧಗಳ ಗುಚ್ಚವೇ ಇದೆ. ಈ ಎಲ್ಲ ಕಾರಣಗಳಿಂದಲೋ ಏನೋ ಶ್ರೀಲಂಕಾ ಅನ್ಯ ದೇಶ ಎಂದು ಅನಿಸುವುದೇ ಇಲ್ಲ. ನಮ್ಮ ಮತ್ತು ಅವರ ಆಹಾರ, ಉಡುಗೆ - ತೊಡುಗೆಗಳಲ್ಲಿ ಅಷ್ಟು ವ್ಯತ್ಯಾಸವಿಲ್ಲ. ಜನ ಕೂಡ ಮೃದು ಸ್ವಭಾವದವರು ಎನಿಸುತ್ತದೆ. ವಿಜ್ಞಾನ- ತಂತ್ರಜ್ಞಾನಗಳ ವಿಷಯಗಳು ಅಲ್ಲಿನ್ನೂ ವ್ಯಾಪಕವಾಗಿಲ್ಲ. ಹಾಗಾಗಿ ಕೊಲಂಬೋ ನೋಡಿದರೆ ಹತ್ತು ವರ್ಷಗಳ ಹಿಂದಿನ ಬೆಂಗಳೂರು ನೋಡಿದಂತೆ ಅನಿಸುತ್ತದೆ. ಹಾಗಾಗಿಯೇ ಪ್ರವಾಸಿಗರಿಗೆ ಅದರಲ್ಲೂ ನವ ದಂಪತಿಗಳಿಗೆ ಲಂಕಾ ಸ್ವರ್ಗದಂತಿದೆ.
ತೆಂಗು ಮತ್ತು ಲಂಕನ್ನರು: ಲಂಕಾದ ಮುಖ್ಯ ಬೆಳೆ ಚಹಾ, ತೆಂಗು, ಭತ್ತ ಮತ್ತು ರಬ್ಬರ್ . ಲಂಕನ್ನರು ತೆಂಗಿಗೆ ತುಂಬಾ ಮಹತ್ವ ಕೊಡುತ್ತಾರೆ. ಆ ಮಹತ್ವ ಹೇಳುವ ಒಂದು ಕಥೆಯನ್ನು ಶ್ರೀಲಂಕಾದಲ್ಲಿ ನಮ್ಮ ಪತ್ರಕರ್ತರ ತಂಡವನ್ನು ಸುತ್ತಿಸಿದ ಹೆಸರಾಂತ ಪ್ರವಾಸಿ ಸಂಸೆ ಎಯ್ಟ್ಕೆನ್ ಸ್ಪೆನ್ಸ್ನ ಮುಖ್ಯಅಕಾರಿ ಪ್ರಶಾಂತ್ ದಿಸೆನಾಯಕೆ ಹೇಳಿದರು. ಒಮ್ಮೆ ಅನೇಕ ದೇಶಗಳ ಮುಖ್ಯಸ್ಥರ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿದ್ದ ಅನೇಕ ನಾಯಕರು ತಮ್ಮ ತಮ್ಮ ದೇಶಗಳ ವಿಜ್ಞಾನಿಗಳ ಕೌಶಲ ಮತ್ತು ಪ್ರತಿಭೆಯನ್ನು ಹೊಗಳುತ್ತಿದ್ದರು. ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ವಿಜ್ಞಾನಿಗಳು ಸೂಪರ್ ಕಂಪ್ಯೂಟರ್ ಕಂಡುಹಿಡಿದು ಅದನ್ನು ಅನೇಕ ಶಾರೀರಕ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲು ಬಳಸುತ್ತಿರುವ ಬಗ್ಗೆ ಹೇಳಿದರು. ಫ್ರಾನ್ಸ್ನವರೂ ಕೂಡ ತಮ್ಮ ವಿಜ್ಞಾನಿಗಳು ರೋಬೋಟ್ಗಳಿಂದಲೇ ನಿತ್ಯದ ಅನೇಕ ಕೆಲಸ ನಿರ್ವಹಿಸುವ ವ್ಯವಸ್ಥೆ ರೂಪಿಸಿರುವುದಾಗಿ ಹೇಳಿಕೊಂಡರು. ಭಾರತದ ಪ್ರಧಾನಿಗಳು ತಮ್ಮ ದೇಶದ ವಿಜ್ಞಾನಿಗಳು ಕಾಲಿಲ್ಲದೆ ಹುಟ್ಟಿದ್ದ ಮಗುವಿಗೆ ಯಶಸ್ವಿಯಾಗಿ ಕಾಲು ಜೋಡಿಸಿದ್ದು ಆ ಮಗು ಮುಂದೆ ಒಲಂಪಿಕ್ಸ್ನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ಸರದಿ ಬಂದಾಗ ಲಂಕಾದ ಅಧ್ಯಕ್ಷರು ಹೇಳಿದ್ದು: ನಮ್ಮ ದೇಶದಲ್ಲೂ ಒಂದು ಹೆಣ್ಣು ಮಗು ಹುಟ್ಟಿತ್ತು ಅದಕ್ಕೆ ಮೆದುಳು ಇರಲಿಲ್ಲ. ಆ ಮೆದುಳಿನ ಜಾಗಕ್ಕೆ ತೆಂಗಿನಕಾಯಿಯನ್ನು ಕೂಡಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾದರು, ಮುಂದೆ ಆ ಮಗು ಶ್ರೀಲಂಕಾದ ಅಧ್ಯಕ್ಷೆಯಾಯಿತು.
೧ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
Subscribe to:
Posts (Atom)