ಇದು ೨೦೦೫ರ ಆಗಸ್ಟ್ ೧೫ರಂದು ತೆಗೆದ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆ ಚಿತ್ರ. ಈ ಚಿತ್ರ ತೆಗೆದ ಹಿನ್ನೆಲೆಯನ್ನು ಹೇಳಲೇಬೇಕು. ಸ್ಥಳೀಯವಾಗಿ ನಾವು ಲಾಂಚ್ ಮಾಡಲು ಉದ್ದೇಶಿಸಿದ್ದ ವಿಜಯ ಕರ್ನಾಟಕ ಪತ್ರಿಕೆಯ ‘ತುಂಗಭದ್ರಾ ವಿಜಯ’ದ ಮೊದಲ ಸಂಚಿಕೆಗೆ ಲೀಡ್ ಫೋಟೋ ಬೇಕಿತ್ತು. ವಾಡಿಕೆಯಂತೆ ತುಂಗಭದ್ರೆ ತುಂಬಿದರೆ ಆಗಸ್ಟ್ ೧೫ಕ್ಕೆ ಎಲ್ಲ ೩೩ ಕ್ರಸ್ಟ್ ಗೇಟುಗಳನ್ನೂ ತೆರೆದು ನದಿಗೆ ನೀರು ಬಿಡುತ್ತಾರೆ. ಅಂದು ಜನವೋ ಜನ, ಸಂಭ್ರಮ ಮುಗಿಲು ಮುಟ್ಟುತ್ತದೆ. ೩೩ ಕ್ರಸ್ಟ್ ಗೇಟ್‌ಗಳಿಂದ ಹೊರಬರುತ್ತಿರುವ ಚಿತ್ರ ತೆಗೆದು ಹಾಕುವುದು ಸಂಪ್ರದಾಯ. ನಮ್ಮ ಕಚೇರಿಯಲ್ಲಿದ್ದ ಏಳು ಮೆಗಾ ಪಿಕ್ಸೆಲ್‌ನ ಡಿಜಿಟಲ್ ಕ್ಯಾಮರಾ ಉಪಯೋಗಿಸಿ ವಿಕ್ಷಣಾ ಗೋಪುರದಿಂದ ಈ ಕೆಳಗಿನ ಚಿತ್ರ ತೆಗೆಯಲು ಯತ್ನಿಸಿದೆ. ಟ್ರೈಪಾಡ್ ಇಲ್ಲದೆ ಅ ಭಯಂಕರ ಗಾಳಿ, ಮಂಜು ಮುಸುಕಿದ ವಾತಾವರಣದಲ್ಲಿ ಈ ಫೋಟೋವನ್ನು ಪನೋರಮಾ ಟೆಕ್ನೋಲಜಿ ಉಪಯೋಗಿಸಿ ತೆಗೆಯಲಾಗಿದೆ.
ಪನೋರಮಾ: ಒಂದು ದೃಶ್ಯವನ್ನು ವಿಭಾಗ ಮಾಡಿಕೊಂಡು ಏಳೆಂಟು ಶಾಟ್‌ಗಳಲ್ಲಿ ಸೆರೆ ಹಿಡಿದು ಅದನ್ನು ಕಂಪ್ಯೂಟರ್‌ನಲ್ಲಿ ಕ್ಯಾಮರಾ ಕಂಪನಿ ಕೊಡುವ ಸಾಫ್ಟ್‌ವೇರ್ ಉಪಯೋಗಿಸಿ ಜೋಡಿಸುವುದು. ಪ್ರತಿ ಶಾಟ್ ತೆಗೆಯುವಾಗಲೂ ಅಲ್ಪ, ಸ್ವಲ್ಪ ಅಡ್ಡಡ್ಡವಾಗಿಯೋ, ಉದ್ದುದ್ದವಾಗಿಯೋ, ವ್ಯತ್ಯಾಸವಾದರೆ ಕ್ಯಾಮರ ಅದನ್ನು ಪ್ರತ್ಯೇಕ ಫೋಟೋ ಎಂದು ತಿಳಿದುಕೊಳ್ಳುತ್ತದೆ. ಆದ್ದರಿಂದ ಮತ್ತೆ ಪ್ರಯತ್ನಿಸಬೇಕು. ಇದು ಈ ರೀತಿಯ ಫೋಟೋ ತೆಗೆಯುವಾಗ ಇರುವ ಚಾಲೆಂಜ್. ಅದೂ ಮೋಡದ ವಾತಾವರಣವಿರುವಾಗ ಸಿಗುವ ಕಡಿಮೆ ಬೆಳಕಲ್ಲಿ ಟ್ರೈಪಾಡ್ ಇಲ್ಲದೆಯೇ ಫೋಟೋಗ್ರಫಿಯ ಬಗ್ಗೆ ಆಳವಾದ ಜ್ಞಾನವಿಲ್ಲದೆ ತೆಗೆಯುವುದು ಇನ್ನೂ ಕಷ್ಟ. ಕೇವಲ ಪ್ರಯೋಗಾತ್ಮಕವಾಗಿ ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ. ಉಳಿದಂತೆ ತುಂಬಿ ತುಳುಕುತ್ತಿರುವ ತುಂಗಭದ್ರೆಯ ಕಲರವವನ್ನು ನನ್ನದೇ ಆಂಗಲ್‌ಗಳಲ್ಲಿ ಚಿತ್ರಿಸಿರುವುದನ್ನು ಇಲ್ಲಿ ಕೊಟ್ಟಿದ್ದೇನೆ ಕಣ್ತುಂಬಿಕೊಳ್ಳಿ.
adbutha, mohaka,sundara
ReplyDeleteಚೆನ್ನಾಗಿದೆ .ಆ ದಿನ ತೆಗೆಯುವಾಗ ನಾನು ನಿಮ್ಮ ಜೊತೆ ಇದ್ದೆ
ReplyDelete