ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ
ಈ ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು
ತೀರಿಕೊಂಡು ಇಂದಿಗೆ ಒಂದು ವರ್ಷ. ಅನೇಕ ಒಳ್ಳೆಯ
ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುವ ಅವರನ್ನು ತುಂಬು ಪ್ರೀತಿಯಿಂದ ನೆನೆಯಬೇಕಾದ ದಿನವಿದು.
ರಾಘವನ್ ಅವರಂಥ ವ್ಯಕ್ತಿಗಳು ಯಾವಾಗಲೂ ಮನದಲ್ಲೇ ಇರುತ್ತಾರೆ. ಅವರ ನೆನಪನ್ನು ಸಾರ್ವಜನಿಕವಾಗಿ
ಮತ್ತೊಮ್ಮೆ ಹಂಚಿಕೊಳ್ಳಲು ಇದೊಂದು ನೆಪ ಅಷ್ಟೆ.